Advertisement

ಪೌರತ್ವ, ಬಿಜೆಪಿ ಜತೆ ಹೊಂದಾಣಿಕೆ: ಜೆಡಿಯುನಲ್ಲಿ ಭಿನ್ನಮತ

10:02 AM Jan 24, 2020 | Sriram |

ಪಾಟ್ನಾ: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿರುವ ವಿಚಾರ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿರುವ ವಿಚಾರ ಜೆಡಿಯುನಲ್ಲಿ ಭಿನ್ನಮತ ಭುಗಿಲೇಳಲು ಕಾರಣವಾಗಿದೆ. ರಾಜ್ಯಸಭೆ ಮಾಜಿ ಸದಸ್ಯ, ಜೆಡಿಯು ಹಿರಿಯ ನಾಯಕ ಪವನ್‌ ವರ್ಮಾ 2 ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್‌ಗೆ ಪತ್ರ ಬರೆದು ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿಗೆ ಬೆಂಬಲ ನೀಡುವುದರ ಬಗ್ಗೆ ತಾತ್ವಿಕ ನಿಲುವು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದರು. ಜತೆಗೆ ಬಿಜೆಪಿ ಸಮಾಜ ವಿಭಜಿಸುವ ಚಿಂತನೆಯಲ್ಲಿದೆ ಎಂದಿದ್ದರು.

Advertisement

ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿತೀಶ್‌ ಕುಮಾರ್‌ “ಅವರೊಬ್ಬ ವಿದ್ವಾಂಸ. ಅವರ ಬಗ್ಗೆ ನನಗೆ ವೈಯಕ್ತಿಕ ಗೌರವಗಳಿವೆ. ಆದರೆ ಇಂಥ ಹೇಳಿಕೆಗಳನ್ನು ನೀಡಿರುವುದು ನನಗೆ ದಿಗ್ಭ್ರಮೆ ಮೂಡಿಸಿದೆ’ ಎಂದಿದ್ದಾರೆ. ಅವರು ಪ್ರಸ್ತಾಪ ಮಾಡಿರುವ ಬಗ್ಗೆ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಎಲ್ಲವೂ ಸ್ಪಷ್ಟವಾಗಿದೆ ಎಂದಿದ್ದಾರೆ.

ಪಕ್ಷದಲ್ಲಿ ಇರಲು ಮನಸ್ಸಿಲ್ಲದಿದ್ದರೆ ಅವರು ಹೊರ ನಡೆಯಬಹುದು ಎಂದು ಸೂಚ್ಯವಾಗಿಯೇ ಹೇಳಿದ್ದಾರೆ. ಪೌರತ್ವ ಕಾಯ್ದೆ ಮತ್ತು ಇತರ ವಿಚಾರಗಳಲ್ಲಿ ನೀಡಿರುವ ಬೆಂಬಲ ಹಿಂಪಡೆಯುವುದಿಲ್ಲ ಎಂದಿದ್ದಾರೆ.

ವರ್ಮಾ ತಿರುಗೇಟು: ಬಿಹಾರ ಸಿಎಂ ಮಾತುಗಳಿಗೆ ತಿರುಗೇಟು ನೀಡಿರುವ ವರ್ಮಾ, ಪಕ್ಷದ ಮತ್ತು ದೇಶದ ಹಿತದೃಷ್ಟಿಯಿಂದ ಮಾತನಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ತಾವು ಪ್ರಸ್ತಾಪ ಮಾಡಿರುವ ಅಂಶಗಳ ಬಗ್ಗೆ ಉತ್ತರ ಸಿಕ್ಕಿಲ್ಲ. ಅದು ಸಿಕ್ಕಿದ ಬಳಿಕ ಮುಂದಿನ ದಾರಿಯ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next