ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು. ನಗರದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಕುತಂತ್ರ: ದೇಶದಲ್ಲಿ ಪೌರತ್ವ ಕಾನೂನುಗೆ ತಿದ್ದುಪಡಿ ತರಲು ಸಮಾರು ವರ್ಷಗಳಿಂದ ಹಲವಾರು ನಾಯಕರು ಪ್ರಯತ್ನ ಪಟ್ಟಿದ್ದಾರೆ. ಆದರೆ ಆ ಕೆಲಸ ಈಗ ಸಾಧ್ಯ ವಾಗಿದೆ. ಪಾಕಿಸ್ತಾನ ಭಾರತದಿಂದ ವಿಭಜನೆ ಯಾದ ನಂತರ ಅನೇಕ ಅಲ್ಪಸಂಖ್ಯಾತರು ಭಾರತಕ್ಕೆ ಬಂದಿದ್ದಾರೆ. ವಿಭಜನೆ ನಂತರ 2ನೇ ದರ್ಜೆ ನಾಗರಿಕರಂತೆ ಪಾಕಿಸ್ತಾನದಲ್ಲಿ ಹಿಂದು ಗಳನ್ನು ಕೀಳಾಗಿ ಕಾಣಲಾಗುತ್ತಿದೆ.
ನೋವು, ದಬ್ಟಾಳಿಕೆ ತಾಳಲಾರದೆ ಭಾರತಕ್ಕೆ ಬಂದಿದ್ದಾರೆ.ಯಾವುದೇ ಪೌರತ್ವ ಇಲ್ಲದೆ ಕಳೆದ 40 ವರ್ಷದಿಂದ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಕಾನೂನು ಬಗ್ಗೆ ಮೊದಲು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಾತನಾಡಿದ್ದರು. ನರೇಂದ್ರ ಮೋದಿ ಕಾನೂನು ಜಾರಿಗೆ ತಂದಿದ್ದಾರೆ. ಏನೋ ಆಗಲಿದೆ ಎಂದು ಕಾಂಗ್ರೆಸ್ ಮುಸ್ಲಿಮರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು. ಕಾನೂನು ಜಾರಿಯಾದರೆ ದೇಶದ ಮುಸ್ಲಿಮ ರನ್ನು ಯಾರೂ ಓಡಿಸುವುದಿಲ್ಲ. ಪಾಕಿಸ್ತಾನ ದಿಂದ ಯಾರೂ ಬರುವಂತಿಲ್ಲ ಎಂಬುದು ಕಾನೂನಿನ ಉದ್ದೇಶ. ಆದರೆ ಕಾಂಗ್ರೆಸ್, ಇತರ ಪಕ್ಷಗಳು ಇಲ್ಲಸಲ್ಲದ ಅಪಪ್ರಚಾರ ಏಕೆ ಮಾಡುತ್ತಿವೆ ಎಂದು ಪ್ರಶ್ನಿಸಿದರು.
ಕಾನೂನು ಇನ್ನಷ್ಟು ಗಟ್ಟಿಯಾಗಲಿದೆ: ಪಾಕಿಸ್ತಾನ ದಿಂದ ಹಿಂದೂಗಳಲ್ಲದವರು ಬಂದು ದೇಶ ದಲ್ಲಿ ನೆಲೆಸಿದರೆ ನಮ್ಮ ಮಕ್ಕಳಿಗೆ ಇರಲು ಮನೆ, ಊಟ, ವಿದ್ಯಾಭ್ಯಾಸ ಸಿಗದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಭಾರತ ಭಾರತೀಯರಿಗೆ ಸೇರಿದ್ದು, ಪಾಕಿಸ್ತಾನ, ಆಫ್ಘಾನಿಸ್ಥಾನಕ್ಕೆ ರಿದ್ದಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರೂ ಅರ್ಥ ಮಾಡಿಕೊಂಡು ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಯಾವುದೇ ಕಾರಣಕ್ಕೂ ಈ ಕಾನೂನು ವಾಪಸ್ ಪಡೆ ಯುವ ಪ್ರಶ್ನೆಯೇ ಇಲ್ಲ.
ಈ ಕಾನೂನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಆಗಲಿದೆ. ಪ್ರಪಂಚದಲ್ಲಿ ಭಾರತ ಬಲಾಡ್ಯಗೊಳ್ಳಲು ಪೌರತ್ವ ಕಾನೂನು ಜಾರಿಯಾಗಲೇಬೇಕು. ಕಾಂಗ್ರೆಸ್ ಮಾಡಿದ ತಪ್ಪು ನಿರ್ಧಾರಗಳಿಂದ ದೇಶ ಭಾಗವಾಯಿತು. ದೇಶ ಸದೃಢವಾಗಿ ರಲು ನಾವೆಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು. ಅಭಿಯಾನದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಎಸ್. ಶಿವಣ್ಣ, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಪಾಲಿಕೆ ಸದಸ್ಯ ರಾದ ಸಿ.ಎನ್. ರಮೇಶ್, ಮಲ್ಲಿಕಾರ್ಜು ನಯ್ಯ, ಶಿಪವ್ರಸಾದ್, ಲಕ್ಷ್ಮೀಶ್, ಕೊಪ್ಪಲ್ ನಾಗರಾಜು, ಡಾ. ಸಂಜಯನಾಯಕ್ ಮತ್ತಿತರರಿದ್ದರು.