Advertisement

ಪೌರತ್ವ ತಿದ್ದುಪಡಿಗೆ ಜಮಾತೆ ಇಸ್ಲಾಮಿ ಹಿಂದ್‌ ವಿರೋಧ

06:12 PM Dec 13, 2019 | Team Udayavani |

ಬಾಗಲಕೋಟೆ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜಮಾಅತ್‌ ಎ ಇಸ್ಲಾಮಿ ಹಿಂದ್‌ ಬಾಗಲಕೋಟೆ ನೇತೃತ್ವದಲ್ಲಿ ನೂರಾರು ಮುಸ್ಲಿಂ ಬಾಂಧವರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಕೆಲಕಾಲ ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಲೋಕಸಭೆಯಲ್ಲಿ ಅಂಗೀಕಾರಗೊಂಡ, ರಾಜ್ಯಸಭೆಯಲ್ಲಿ ಚರ್ಚೆಯಾಗಲಿರುವ ಪೌರತ್ವ ತಿದ್ದುಪಡಿ ಮಸೂದೆ, ನಮ್ಮ ದೇಶದ ನೈತಿಕ ಸಂವಿಧಾನಿಕ ಸ್ಫೂರ್ತಿ ಜಾತ್ಯತೀತ ಪರಂಪರೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಪೌರತ್ವ ಪ್ರದಾನದಲ್ಲಿ ಧಾರ್ಮಿಕ ನೆಲೆಯ ತಾರತಮ್ಯ ನಮ್ಮ ಸಂವಿಧಾನದ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ. ಕೋಮು ಧ್ರುವೀಕರಣ ಮತ್ತು ಮುಸ್ಲಿಂರನ್ನು ಬಲಿಪಶು ಮಾಡುವ ರಾಜಕೀಯವೇ ಈ ತಿದ್ದುಪಡಿಯ ನೈಜ ಉದ್ದೇಶವಾಗಿದೆ. ಹಲವು ದೇಶಗಳ ನಿರಾಶ್ರಿತರ ಕುರಿತು ಮೌನ ವಹಿಸಿರುವುದೂ ಇದರ ನ್ಯೂನ್ಯತೆಯಾಗಿದೆ. ಇದು ದೇಶದ ಗಂಭೀರಆರ್ಥಿಕ ಪರಿಸ್ಥಿತಿ ಮತ್ತು ಸಾಮಾನ್ಯ ಪ್ರಜೆಗಳು ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಜಮಾಅತ್‌ ಎ ಇಸ್ಲಾಮಿ ಹಿಂದ್‌ ಬಾಗಲಕೋಟೆ ಸಂಘಟನೆಯ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next