Advertisement

ಸಂವಿಧಾನದ ಆಶಯಗಳಿಗೆ ಸಿಎಎ ಧಕ್ಕೆ: ಶಿವಸುಂದರ್‌

09:46 AM Jan 08, 2020 | Hari Prasad |

ಉಪ್ಪಿನಂಗಡಿ: ಮತೀಯ ನೆಲೆಗಟ್ಟಿನಲ್ಲಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ದೇಶದ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗಿದೆ. ನ್ಯಾಯಾಲಯ ಅಥವಾ ರಾಷ್ಟ್ರಪತಿಯವರೇ ತಪ್ಪೆಸಗಿದಾಗ ಪ್ರತಿಭಟಿಸುವ ಹಕ್ಕು ದೇಶದ ನಾಗರಿಕರಿಗಿದೆ ಎಂದು ಲೇಖಕ ಶಿವಸುಂದರ್‌ ಪ್ರತಿಪಾದಿಸಿದರು. ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣ ವೇದಿಕೆಯ ಆಶ್ರಯದಲ್ಲಿ ಮಂಗಳವಾರ ಸಂಜೆ ಇಂಡಿಯನ್‌ ಸ್ಕೂಲ್‌ ಮುಂಭಾಗ ನಡೆದ ಬೃಹತ್‌ ಪ್ರತಿಭಟನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ಮುಸ್ಲಿಂ ದೇಶಗಳಿಂದ ಹಿಂಸೆಗೊಳಗಾಗಿ ಅಶ್ರಯ ಬಯಸಿದ ಮುಸ್ಲಿಂಮರೇತರಿಗೆ ಪೌರತ್ವ ನೀಡಿದಂತೆ ಮುಸ್ಲಿಂ ದೇಶದಿಂದ ಹಿಂಸೆಗೊಳಗಾಗಿರುವ ಅಹಮ್ಮದೀಯರಿಗೆ ಏಕೆ ಪೌರತ್ವ ನೀಡುತ್ತಿಲ್ಲ? ಅಯೋಧ್ಯೆ ವಿಚಾರವಾಗಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಗೊಂದಲವಿದೆ ಎಂದರು. ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ದೇಶದ ಎಲ್ಲರೂ ರಕ್ತಗತವಾಗಿ ಭಾರತೀಯರು. ಅವರನ್ನು ಭೀತಿಗೆ ಒಳಪಡಿಸುವುದು ಸರಿಯಲ್ಲ ಎಂದರು.

ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಉಪ್ಪಿನಂಗಡಿ ಮಾಲಿಕುದ್ದೀನಾರ್‌ ಮಸೀದಿಯ ಅಧ್ಯಕ್ಷ ಕೆಂಪಿ ಮುಸ್ತಾಫ‌ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಬಾಲನ್‌, ಅಂಬೇಡ್ಕರ್‌ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌, ಹನೀಫ್ ಹುದವಿ, ಯಾಕೂಬ್‌ ಸಹದಿ, ಸುಧೀರ್‌ ಕುಮಾರ್‌ ಮುರೋಳ್ಳಿ, ಇಕ್ಬಾಲ್‌ ಬೆಳ್ಳಾರೆ, ಇಬ್ರಾಹಿಂ ಖಲೀಲ್‌ ತಲಪಾಡಿ ಮಾತನಾಡಿದರು.

ಪ್ರತಿಭಟನಕಾರರು ರಾಷ್ಟ್ರಧ್ವಜದೊಂದಿಗೆ ಅಜಾದಿ ಘೋಷಣೆ ಕೂಗುತ್ತಾ ಉಪ್ಪಿನಂಗಡಿ ಗ್ರಾ.ಪಂ. ಮುಂಭಾಗದ ರಸ್ತೆಯುದ್ದಕ್ಕೂ ಕುಳಿತುಕೊಂಡು ಪ್ರತಿಭಟನಾ ಭಾಷಣಗಳನ್ನು ಆಲಿಸಿದರು. ಸಂಘಟಕರಾದ ಜಲೀಲ್‌ ಮುಕ್ರಿ, ಝಕಾರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next