Advertisement

ಪೌರತ್ವ ಕಾಯ್ದೆ: “ವಿದೇಶದಲ್ಲಿ ಇಲ್ಲದ ವಿರೋಧ ಭಾರತದಲ್ಲೇಕೆ?’

10:10 AM Dec 28, 2019 | sudhir |

ಜಮಖಂಡಿ: ಅಮೆರಿಕ, ಪಾಕಿಸ್ತಾನದಲ್ಲಿ ಪೌರತ್ವ ಕಾಯ್ದೆಯಡಿ ಬೇರೆ ದೇಶದ ಜನರನ್ನು ಹೊರ ಹಾಕಿದರೆ ದೇಶದ್ರೋಹಿ ಕೆಲಸ ಆಗುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಪೌರತ್ವ ಕಾಯ್ದೆ ಜಾರಿಗೆ ತಂದರೆ ದೇಶದ್ರೋಹಿ ಕೆಲಸವಾಗುತ್ತದೆ ಎನ್ನುತ್ತಾರೆ. ಅದು ಹೇಗೆ ಸಾಧ್ಯ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

Advertisement

ತಾಲೂಕಿನ ಹುನ್ನೂರ-ಮಧುರಖಂಡಿ ಗ್ರಾಮದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೌರತ್ವ ಕಾಯ್ದೆ ಬಗ್ಗೆ ಸಂಪೂರ್ಣ ತಿಳಿಯದೆ ದೇಶದ ಅಭಿವೃದ್ಧಿ, ಭದ್ರತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ಇತಿಹಾಸದಲ್ಲಿ ಕೆಲ ಪಕ್ಷಗಳು, ಸಂಘಟನೆಗಳು ಅಲ್ಪಸಂಖ್ಯಾತ, ದೀನ ದಲಿತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕೇವಲ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿಯ ಕೆಲಸಗಳಲ್ಲಿ ತೊಡಗಿಕೊಳ್ಳಬಾರದು. ಪ್ರಪಂಚದ ಎಲ್ಲ ದೇಶಗಳಲ್ಲಿ ಭದ್ರತೆಗಾಗಿ ಇಂತಹ ಕಾನೂನು ಜಾರಿಗೆ ತಂದಿದ್ದು, ಇದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.

ರಾಜ್ಯ ಮತ್ತು ದೇಶದಲ್ಲಿ ದೇಶದ್ರೋಹಿಗಳು ಬಂದಿದ್ದಾರೆ. ಅವರನ್ನು ಗುರುತಿಸುವ ಸಲುವಾಗಿಯೇ ಪೌರತ್ವ ಕಾಯ್ದೆ ಅನುಷ್ಠಾನಗೊಂಡಿದೆ. ಪೊಲೀಸ್‌ ಇಲಾಖೆ ಮಾಡಬೇಕೆಂದು ಯೋಚನೆ ಮಾಡುವ ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕಾಗುತ್ತದೆ. ಕೇವಲ ಪೊಲೀಸ್‌ ಇಲಾಖೆ, ಗುಪ್ತಚರ ಇಲಾಖೆ ಅ ಧಿಕಾರಿಗಳಿಂದ ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next