Advertisement

Israeli government ವಿರುದ್ಧ ನಾಗರಿಕರ ಪ್ರತಿಭಟನೆ

11:39 PM Jul 11, 2023 | Team Udayavani |

ಜೆರುಸಲೇಮ್‌: ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ನೂತನ ಕಾಯ್ದೆ ಜಾರಿಗೆ ತರಲು ಹೊರಟಿರುವ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನೇತೃತ್ವದ ಇಸ್ರೇಲ್‌ ಸರಕಾರದ ವಿರುದ್ಧ ಅಲ್ಲಿನ ನಾಗರಿಕರ ಪ್ರತಿಭಟನೆ ದಿನೇದಿನೆ ಹೆಚ್ಚುತ್ತಿದೆ.

Advertisement

ಮಂಗಳವಾರ ಜೆರುಸಲೇಮ್‌, ಹೈಫಾ ಮತ್ತು ಟೆಲ್‌ ಅವಿವ್‌ಗೆ ಸಂಪರ್ಕಿಸುವ ಹೆದ್ದಾರಿಗಳನ್ನು ಪ್ರತಿಭಟನಾಕಾರರು ಬಂದ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ವಿವಾದಿತ ನ್ಯಾಯಾಂಗ ಕಾಯ್ದೆಗೆ ಇಸ್ರೇಲ್‌ ಸಂಸತ್ತಿನ ಒಕ್ಕೂಟವು ಆರಂಭಿಕ ಅನುಮೋದನೆ ನೀಡಿತು.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next