Advertisement

ಖರೀದಿಗೆ ಮುಗಿ ಬೀಳುತ್ತಿರುವ ಜನ

07:39 PM Apr 24, 2020 | Sriram |

ಗಂಗೊಳ್ಳಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಪ್ರತಿ ದಿನ ಜನ ಮುಗಿ ಬೀಳುತ್ತಿದ್ದು, ಇದರಿಂದ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೀನು ಮಾರುಕಟ್ಟೆಯನ್ನು ವಿಶಾಲವಾದ ಮೈದಾನಕ್ಕೆ ಅಥವಾ ಬೇರೆಡೆಗೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Advertisement

ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ನಾಡದೋಣಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಿ, ಮೀನು ಮಾರಾಟ ಸಮಯ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸೂಚನೆ ನೀಡಿತ್ತು. ಆದರೆ ಇದ್ಯಾವುನ್ನು ಗಮನಕ್ಕೆ ತೆಗೆದುಕೊಳ್ಳದ ಮೀನು ಮಾರಾಟಗಾರರು ಹಾಗೂ ಖರೀದಿಗೆ ಬರುವ ಜನರು ಮಾರುಕಟ್ಟೆಯಲ್ಲಿ ಮುತ್ತಿಗೆ ಹಾಕುತ್ತಿದ್ದಾರೆ.

ಕೋವಿಡ್-19 ವೈರಸ್‌ ಹರಡಂತೆ ಮುನ್ನೆಚ್ಚರಿಕೆ ವಹಿಸಿ ಎಂಬ ಸರಕಾರ ಮನವಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಜನರು ಹಾಗೂ ಮೀನುಗಾರರು ಜಿಲ್ಲಾಡಳಿತದ ಸೂಚನೆಯನ್ನು ಧಿಕ್ಕರಿಸುತ್ತಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

ಸ್ಥಳಾಂತರಕ್ಕೆ ಮನವಿ
ಕಿರಿದಾದ ಗಂಗೊಳ್ಳಿಯ ಮೀನು ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ವಿಶಾಲವಾದ ಮೈದಾನಕ್ಕೆ ಸ್ಥಳಾಂತರಿಸುವಂತೆ ಗಂಗೊಳ್ಳಿ ಪೊಲೀಸರು ಗ್ರಾಮ ಪಂಚಾಯತ್‌ಗೆ ಲಿಖೀತ ಮನವಿ ಸಲ್ಲಿಸಿದ್ದರೂ, ಮೀನು ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಸ್ಥಳೀಯಾಡಳಿತ ದಿವ್ಯ ಮೌನ ವಹಿಸಿದೆ. ಮೀನು ಖರೀದಿಸಲು ಹೆಚ್ಚೆಚ್ಚು ಜನರು ಬರುತ್ತಿರುವುದರಿಂದ ಮಾರುಕಟ್ಟೆ ಒಳಗೆ ಸಾಮಾಜಿಕ ಅಂತರ ಮಾತ್ರ ಮರೀಚಿಕೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next