Advertisement

ರಸ್ತೆ ಒತ್ತುವರಿ ತೆರವಿಗೆ ನಾಗರಿಕರ ಸಹಕಾರ ಅಗತ್ಯ

03:45 PM Mar 08, 2022 | Team Udayavani |

ಕೋಲಾರ: ನಗರದ ಅಭಿವೃದ್ಧಿಗೆ ರಸ್ತೆ ಅಗಲೀಕರಣ ಅಗತ್ಯವಿದೆ, ಸಾರ್ವಜನಿಕರು ಅನಗತ್ಯವಾಗಿಅಡ್ಡಿಪಡಿಸದೇ ಸಹಕರಿಸಿ ಎಂದು ಸಂಸದ ಎಸ್‌.ಮುನಿಸ್ವಾಮಿ ಸಲಹೆ ನೀಡಿದರು.

Advertisement

ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ನಗರಸಭೆ ಆಯುಕ್ತ ಪ್ರಸಾದ್‌,ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ ಜತೆಗೂಡಿ ದಿಢೀರ್‌ ನಗರ ಸಂಚಾರ ನಡೆಸಿದ ಅವರು, ಮೊದಲುನಗರದ ಸರ್ವಜ್ಞ ಉದ್ಯಾನವನದ ಸಮೀಪ ಇರುವಶನೇಶ್ವರ ಸ್ವಾಮಿ ದೇವಾಲಯದ ಬಳಿ ರಸ್ತೆಅಗಲೀಕರಣಕ್ಕೆ ಇರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.

ಪಕ್ಕದಲ್ಲೇ ಇರುವ ಗೌರವ ಆಸ್ಪತ್ರೆ ಮಾಲೀಕರುನಿಯಮಾನುಸಾರ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಸಂಸದರುಸೂಚಿಸಿದ್ದು, ಅದಕ್ಕೆ ಆಸ್ಪತ್ರೆ ಮಾಲೀಕರು ಒಪ್ಪಿಗೆ ಸೂಚಿಸಿದರು.

ಇದಾದ ನಂತರ ನಗರದ ಹಳೆ ಬಸ್‌ನಿಲ್ದಾಣಕ್ಕೆಭೇಟಿ ನೀಡಿದ ಸಂಸದರ ತಂಡ, ಅಲ್ಲಿ ಎಲ್ಲೆಂದರಲ್ಲಿತಲೆಯೆತ್ತಿರುವ ಅಂಗಡಿಗಳನ್ನು ತೆರವುಗೊಳಿಸಿ, ಈಅಂಗಡಿಗಳಿಗೆ ಪಕ್ಕದ ಇಂದಿರಾ ಕ್ಯಾಂಟೀನ್‌ ಸಮೀಪಅವಕಾಶ ಮಾಡಿಕೊಡಿ ಎಂದು ನಗರಸಭೆಆಯುಕ್ತರಿಗೆ ಸೂಚಿಸಿದರು.

ಕೆಲವು ಅಂಗಡಿ ಮಾಲೀಕರು ನಮಗೂ ಅಂಗಡಿ ನಿರ್ಮಿಸಿಕೊಡಲು ಕೋರಿದಾಗ ನಗರಸಭೆಆಯುಕ್ತರಿಗೆ ಸೂಚಿಸಿದ ಸಂಸದರು, ಶೀಘ್ರವಾಗಿಶೀಟ್‌ ಅಳವಡಿಸಿ ಅಂಗಡಿ ಮಾಡಿಕೊಡಿ, ಇದರಿಂದನಗರಸಭೆಗೆ ಆದಾಯವೂ ಬರಲಿದೆ ಎಂದು ಸಲಹೆ ನೀಡಿದರು.

Advertisement

ದೇಗುಲಕ್ಕೆ ಜಾಗ: ನಗರದ ಡೂಂಲೆ„ಟ್‌ ವೃತ್ತದ ಸಮೀಪ ಕಠಾರಿ ಗಂಗಮ್ಮ ದೇಗುಲವನ್ನು ರಸ್ತೆಅಗಲೀಕರಣದ ಸಂದರ್ಭದಲ್ಲಿ ಧ್ವಂಸ ಮಾಡಿದ್ದು, ದೇಗುಲ ಮರು ನಿರ್ಮಾಣಕ್ಕಾಗಿ ನಗರದ ಸಂಚಾರ ಠಾಣೆ ಸಮೀಪ 50 ಅಡಿ ಅಗಲ ಹಾಗೂ 50 ಅಡಿ ಉದ್ದದ ಜಾಗವನ್ನು ನಿಗ ದಿ ಮಾಡಲಾಗಿದ್ದು, ಈ ಜಾಗವನ್ನು ದೇಗುಲ ಸಮಿತಿ ವಶಕ್ಕೆ ನೀಡಲು ಸೂಚಿಸಿದರು.

ವೇಣುಗೋಪಾಲಸ್ವಾಮಿ ಪುಷ್ಕರಣಿ ಸಮೀಪ ದೇಗುಲದ 4 ಅಡಿ ಜಾಗ ತೆರವುಗೊಳಿಸಿ ರಸ್ತೆಅಗಲೀಕರಣಕ್ಕೆ ನೆರವಾಗಲು ಮನವಿ ಮಾಡಿದಾಗದೇವಾಲಯ ಸಮಿತಿ ಒಪ್ಪಿಗೆ ನೀಡಿತು.ಇದಾದ ನಂತರ ಸಂಸದರು, ಡಿಸಿಯವರಿದ್ದ ತಂಡನಗರದ ನಾಗರಕುಂಟೆ ನವೀಕರಣ ಕಾಮಗಾರಿ ಸ್ಥಗಿತದ ಕುರಿತು ಪರಿಶೀಲನೆ ನಡೆಸಿತು.

ಈ ವೇಳೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಪ್ರಸ್ತಾಪಿಸಿದ ಸಂಸದರು, ಇಲ್ಲಿ ಸುಂದರ ವಾಕಿಂಗ್‌ ಪಾಥ್‌ ಮಾಡಿ, ಅದಕ್ಕೆ ಅನುದಾನ ಕೊಡಿಸಿಕೊಡುವ ಭರವಸೆ ನೀಡಿದರು. ಇದೇ ಸಂದಭದಲ್ಲಿ ಅಲ್ಲಿಗೆ ಸಮೀಪದಲ್ಲೇಕಾಂಗ್ರೆಸ್‌ ಮುಖಂಡ ಊರುಬಾಗಿಲು ಶ್ರೀನಿವಾಸ್‌ರಸ್ತೆ ಒತ್ತುವರಿ ಮಾಡಿ ಕಟ್ಟಿದ್ದ ಗೋಡೆಯನ್ನು ತೆರವುಗೊಳಿಸಲಾಯಿತು.

ರಾಜ್ಯ ಬಜೆಟ್‌ನಲ್ಲಿ ಕೋಲಾರಕ್ಕೆ ಏನೂ ನೀಡಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ, ಅವರು ಸ್ವಲ್ಪಕಾಲ ಸುಮ್ಮನಿರಲಿ ಬಜೆಟ್‌ನಲ್ಲಿ ಏನು ಸಿಕ್ಕಿದೆ ಎಂಬುದು ಗೊತ್ತಾಗುತ್ತದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ಬಜರಂಗದಳ ಮುಖಂಡಬಾಲಾಜಿ, ಮುಖಂಡರಾದ ಸಾಮಾ ಬಾಬು, ನಾಮಾಲ ಮಂಜು, ವಕೀಲ ನಾಗೇಂದ್ರ, ಮುಖಂಡವಿಜಯಕುಮಾರ್‌, ಶ್ರೀಗಂಧ ರಾಜೇಶ್‌ ಮತ್ತಿತರರಿದ್ದರು.

ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ನಗರ ಸುಂದರಗೊಳ್ಳಲು ಸಾಧ್ಯ,ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಹಲವಾರುವರ್ಷಗಳಿಂದ ನಗರದಲ್ಲಿ ರಸ್ತೆಗಳುಸರಿಯಿಲ್ಲದೇ ಹಳ್ಳಿಯಂತಿದೆ, ಇದನ್ನುಸರಿಪಡಿಸಿ ಸುಂದರ ಕೋಲಾರ ಮಾಡುವನಮ್ಮ ಆಶಯ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವದು. -ಮುನಿಸ್ವಾಮಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next