Advertisement

ಬಾಯ್ತುಂಬ ನಗಲ್ಲ ಭದ್ರತಾ ಸಿಬಂದಿ!

09:35 AM Oct 09, 2018 | Karthik A |

ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆ ನಡೆಸುವ ಸಿಐಎಸ್‌ಎಫ್ ಸಿಬಂದಿ ಇನ್ನು ಬಾಯ್ತುಂಬ ನಗುವುದಿಲ್ಲ. ಬದಲಿಗೆ ಮುಗುಳ್ನಗು ಹಾಗೂ ಖಡಕ್‌ ಲುಕ್‌ನಲ್ಲೇ ನಿಮ್ಮನ್ನು ಸ್ವಾಗತಿಸುತ್ತಾರೆ.

Advertisement

ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಜವಾಬ್ದಾರಿ ಹೊತ್ತಿರುವ ಸಿಐಎಸ್‌ಎಫ್ ತನ್ನ ಕಾರ್ಯಾಚರಣೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಸದ್ಯ ಸಿಐಎಸ್‌ಎಫ್ ಸಿಬ್ಬಂದಿ ಪ್ರಯಾಣಿಕ ಸ್ನೇಹಿಯಾಗಿದ್ದಾರೆ. ಇದರಿಂದ ಕೆಲವು ಬಾರಿ ಕಠಿಣ ನಿಯಮ ಪಾಲಿಸದೆ, ಅಪಾಯಕ್ಕೆಡೆ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಇನ್ನು ಪ್ರಯಾಣಿಕರ ಜೊತೆ ಸ್ನೇಹದಿಂದ ವರ್ತಿಸಿದರೂ, ಭದ್ರತೆಗೆ ತೊಡಕಾಗದಂತೆ ಕಠಿಣ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಸದ್ಯ ಭದ್ರತಾ ಸಿಬಂದಿ ಬಾಯ್ತುಂಬ ನಕ್ಕು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದಾರೆ. ಇದರ ಬದಲಿಗೆ ಸ್ವಲ್ಪವೇ ನಕ್ಕು ಸ್ವಾಗತಿಸುವುದರಿಂದ, ಕಠಿಣ ನೀತಿ ಪಾಲನೆಯ ಬಗ್ಗೆ ಜನರಿಗೆ ಮನದಟ್ಟಾಗುತ್ತದೆ ಎಂದು ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಿಐಎಸ್‌ಎಫ್ ಪ್ರಧಾನ ನಿರ್ದೇಶಕ ರಾಜೇಶ್‌ ರಂಜನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next