Advertisement

ಮಂಗಳೂರಿನಲ್ಲಿ 5.88 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ

09:58 AM Sep 17, 2019 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬಾೖಗೆ ತೆರಳಲು ಯತ್ನಿಸಿದ ಪ್ರಯಾಣಿಕನಿಂದ ಲಕ್ಷಾಂತರ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಿಐಎಸ್‌ಎಫ್‌ ಸಿಬಂದಿ ರವಿವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಹ್ಯಾರಿ ಸ್ಟೆಫನ್‌ ಆ್ಯಂತೋನಿ ಡಿ’ಸೋಜಾ ಬಂಧಿತ ಪ್ರಯಾಣಿಕ. ಆತನಿಂದ 5.88 ಲಕ್ಷ ಮೌಲ್ಯದ ದಿರಾಂ ಮತ್ತು ಡಾಲರ್‌ ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ.

ರವಿವಾರ ಸಂಜೆ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬಾೖಗೆ ತೆರಳಲು ಯತ್ನಿಸುತ್ತಿದ್ದ ಪ್ರಯಾಣಿಕನನ್ನು ಅಧಿಕಾರಿಗಳು ತಪಾಸಣೆ ನಡೆಸಿದರು.

ಪ್ರಯಾಣಿಕನಿಂದ 2.93 ಲಕ್ಷ ದಿರಾಂ, 2.94 ಲಕ್ಷ ಮೌಲ್ಯದ ಡಾಲರ್‌ ವಿದೇಶಿ ಕರೆನ್ಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ವೌಲ್ಯ 5.88 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈತನನ್ನು ವಿಚಾರಣೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next