Advertisement

ಸಿಐಎಸ್‌ಎಫ್: 2 ಸಾವಿರ ಹುದ್ದೆ ಹೆಚ್ಚಳಕ್ಕೆ ಅಸ್ತು

02:08 AM Jan 22, 2020 | Team Udayavani |

ಹೊಸದಿಲ್ಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯಲ್ಲಿ 2 ಸಾವಿರ ಹುದ್ದೆಗಳನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಗೃಹ ಸಚಿವಾಲಯವು ಅನುಮತಿ ನೀಡಿದೆ.

Advertisement

ವಿಮಾನ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಅಣು ಸ್ಥಾವರಗಳು ಮುಂತಾದ ಆಯಕಟ್ಟಿನ ಕಡೆಗಳಲ್ಲಿ ಭದ್ರತೆ ನೀಡುವ ನಿಟ್ಟಿನಲ್ಲಿ ಸಿಐಎಸ್‌ಎಫ್ ಸಿಬಂದಿ ಸಂಖ್ಯೆ ಹೆಚ್ಚಿಸ ಲಾಗು ವುದು ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಸದ್ಯ ದೇಶದಲ್ಲಿ 1.8 ಲಕ್ಷ ಸಿಐಎಸ್‌ಎಫ್ ಸಿಬಂದಿ ಇದ್ದಾರೆ. ಶ್ರೀನಗರ ಮತ್ತು ಜಮ್ಮು ವಿಮಾನ ನಿಲ್ದಾಣ ಗಳಲ್ಲಿಯೂ ಈ ಯೋಧರನ್ನು ನಿಯೋಜಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಸಿಐಎಸ್‌ಎಫ್ ದೇಶದ 60 ವಿಮಾನ ನಿಲ್ದಾಣಗಳಿಗೆ ಭದ್ರತೆ ಒದ ಗಿಸು ತ್ತಿದೆ. ಎಸ್‌ಎಸ್‌ಜಿ ಎಂಬ ಹೆಸರಿನ ಗಣ್ಯರಿಗೆ ಭದ್ರತೆ ನೀಡುವ ಘಟಕವೂ ಇದರಡಿ ಇದೆ. ಸಿಬಂದಿ ಹೆಚ್ಚಳದ ಮೂಲಕ ತಲಾ ಒಂದು ಸಾವಿರ ಸಿಬಂದಿ ಸಂಖ್ಯೆಯ ಎರಡು ಬೆಟಾಲಿಯನ್‌ಗಳನ್ನು ಸಿಐಎಸ್‌ಎಫ್ ಮುಂದಿನ ಎರಡು ವರ್ಷಗಳಲ್ಲಿ ಹೊಂದಲಿದೆ.

Advertisement

Udayavani is now on Telegram. Click here to join our channel and stay updated with the latest news.

Next