Advertisement

ಬದುಕಿಗಾಗಿ ಸಂಕಷ್ಟದ “ಸರ್ಕಸ್‌’

06:32 PM Mar 10, 2021 | Team Udayavani |

ಶಿರಸಿ: ನಲ್ವತ್ತು ಅಡಿಗೂ ಎತ್ತರದಲ್ಲಿ ಜೋಕಾಲಿ, ಹಗ್ಗದ ಮೇಲೆ ನಡಿಗೆ, ಬಳ್ಳಿಯ ಮೇಲೆ ವ್ಯಾಯಾಮ, ಯೋಗಾಸನ, ನರ್ತನ ಒಂದೆರಡೇ ಅಲ್ಲ, ಮೈ ನವಿರೇಳಿಸುವ ದೃಶ್ಯಗಳನ್ನು ಪ್ರೇಕ್ಷಕರ ಎದುರೇ ತೋರಿಸುವ ಸರ್ಕಸ್‌ ನಗರದಲ್ಲಿ ಬೀಡು ಬಿಟ್ಟರೂ ನಿರೀಕ್ಷೆಯಷ್ಟು ಪ್ರೇಕ್ಷಕರು ಬಾರದೇ ಒಪ್ಪತ್ತಿನ ಅನ್ನಕ್ಕೂ ತತ್ವಾರದ ಸ್ಥಿತಿ ನಿರ್ಮಾಣವಾಗಿದೆ. ರಂಗದಲ್ಲಷ್ಟೇ ಅಲ್ಲ, ಇಲ್ಲಿ ಬದುಕಿಗಾಗಿ ಕೂಡ “ಸರ್ಕಸ್‌’ ಮಾಡಬೇಕಾಗಿದೆ.

Advertisement

ಸಾಹಸ ಪ್ರದರ್ಶಿಸುವ ಸರ್ಕಸ್‌ ಕಲಾವಿದರು ಮಾರಿಕಾಂಬಾ ದೇವಿ ಜಾತ್ರೆಯಲ್ಲೂ ಬಂದಾಗಕೋವಿಡ್‌ ಕಾರಣದಿಂದ ಮತ್ತೆ 11 ತಿಂಗಳ ಬಳಿಕ ಮರಳಿ ಪ್ರದರ್ಶನ ಆರಂಭಿಸಿದರೂ ಮೂರುಪ್ರದರ್ಶನದಿಂದ ಒಂದು ಪ್ರದರ್ಶನದಷ್ಟೂಪ್ರೇಕ್ಷಕರಾಗುತ್ತಿಲ್ಲವಾಗಿದೆ. ಹೊತ್ತಿನ ಊಟಕ್ಕೂಕಷ್ಟಪಡುವ ಸ್ಥಿತಿ ಇದೆ. ಒಂದು ವರ್ಷದಿಂದಶಿರಸಿಯಲ್ಲೇ ಬೀಡುಬಿಟ್ಟ ಬಳಿಕ ಮತ್ತೆ ಪ್ರದರ್ಶನ ಆರಂಭಿಸಿದ್ದರೂ ಪ್ರೇಕ್ಷಕರಿಲ್ಲದೆ ಕಲಾವಿದರು ಪರದಾಡುವಂತಾಗಿದೆ.

ನಗರದ ಕೋಟೆಕೆರೆ ಕೆಳ ಭಾಗದಲ್ಲಿ ಕಳೆದ ಮಾರ್ಚ್‌ 5 ರಿಂದ ಅಪೋಲೊ ಸರ್ಕಸ್‌ ಪ್ರದರ್ಶನ ಆರಂಭಿಸಿದ್ದರೂ ದಿನಕ್ಕೆ 1ರಿಂದ 4,4ರಿಂದ 7, 7ರಿಂದ 10 ಪ್ರದರ್ಶನ ನಡೆಸಲುಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿದರೂ ಪ್ರೇಕ್ಷಕರು ಬಾರದೇ ಪರದಾಟ ಮಾಡುವಂತೆಆಗಿದೆ. ನೇಪಾಳ, ಬಿಹಾರ, ಪಶ್ಚಿಮ ಬಂಗಾಳ, ಪಂಜಾಬ್‌ ಸೇರಿದಂತೆ ದೇಶದ ವಿವಿಧೆಡೆ ಸಾಹಸಿಕಲಾವಿದರು ಎಂದಿನಂತೆ ಚಾಕಚಕ್ಯತೆ ಪ್ರದರ್ಶನನೀಡುತ್ತಿದ್ದರೂ, ಅದನ್ನು ವೀಕ್ಷಿಸುತ್ತಿರುವುದುಬಹುತೇಕ ಖಾಲಿ ಕುರ್ಚಿಗಳೇ ಆಗಿವೆ ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ, ಮುಖ್ಯಸ್ಥ ಸನಿಲ್‌ಜಾರ್ಜ್‌.

ಮಹಿಳೆಯರು ಸೇರಿ ಸುಮಾರು 50 ಕಲಾವಿದರು ಇಲ್ಲಿ ಸಾಹಸ ಪ್ರದರ್ಶನನೀಡುತ್ತಿದ್ದಾರೆ. 60ಕ್ಕೂ ಅಧಿಕ ಜನರು ವ್ಯವಸ್ಥಾಪನೆಯಲ್ಲಿದ್ದಾರೆ. ನೆಲಬಾಡಿಗೆ, ವಿದ್ಯುತ್‌, ಕಲಾವಿದರ ವೇತನ, ಊಟ, ತಿಂಡಿಗೂಸಾಕಾಗುವಷ್ಟು ಆದಾಯ ಸಂಗ್ರಹವಾಗುತ್ತಿಲ್ಲ ಎಂಬುದು ಅಳಲು. ದಿನಕ್ಕೆ ಕನಿಷ್ಠ 35-40 ಸಾವಿರ ವೆಚ್ಚವಾಗುತ್ತದೆ. ಖರ್ಚಿನ ಅರ್ಧದಷ್ಟೂ ಉತ್ಪನ್ನ ಆಗದೇ ಇರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲೂ ಸಂಕಷ್ಟ. ಪ್ರದರ್ಶನ ಆರಂಭಿಸಿದರೂ ಸಂಕಷ್ಟ.ಆಗ ಕೆಲವು ದಾನಿಗಳು ನೆರವಾಗಿದ್ದಕ್ಕೆ ಬಚಾವ್‌ಆಗಿದ್ದೆವು. ಈಗ ಸಹೃದಯ ಪ್ರೇಕ್ಷಕರೇ ಜೀವಾಳ. ಇನ್ನಾದರೂ ಜನರು ಬಂದರೆ ಪ್ರದರ್ಶನ ನಡೆಸಲು ಸಾಧ್ಯ. – ಸನಿಲ್‌ ಜಾಜ್‌, ವ್ಯವಸ್ಥಾಪಕ, ಮುಖ್ಯಸ್ಥ

Advertisement

ಪ್ರದರ್ಶನ ಚೆನ್ನಾಗಿದೆ. ನಾಯಿ ಪ್ರದರ್ಶನ, ಹಗ್ಗದ ಮೇಲಿನ ಸರ್ಕಸ್‌ ಇಷ್ಟವಾಯಿತು. – ಟಿ.ಆರ್‌. ಹೆಗಡೆ, ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next