Advertisement
ಲೋಕಾಯುಕ್ತ ಶಿಫಾರಸುಗಳ ಜಾರಿ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರು ಸೆ. 11ರಂದು ಹೊರಡಿಸಿದ ಸುತ್ತೋಲೆಯಲ್ಲಿ ದಿನಾಂಕವನ್ನು 2017ರ ಸೆ. 11 ಎಂದು ನಮೂದಿಸಲಾಗಿತ್ತು. ಅಲ್ಲದೆ, ಸುತ್ತೋಲೆ ಸಂಖ್ಯೆಯಲ್ಲೂ “ಸಿಆಸುಇ 27 ಸೇಲೋಯು 2017′ ಎಂದು ನಮೂದಾಗಿತ್ತು. ಈ ಸುತ್ತೋಲೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರೇ ಸಹಿ ಮಾಡಿದ್ದರು.
ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಬರುವ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಲೋಕಾಯುಕ್ತ ಕಾಯ್ದೆ 12(3)ರ ಅನ್ವಯ ತನಿಖೆ ನಡೆಸಿ ಆರೋಪ ಭಾಗಷಃ ಅಥವಾ ಪೂರ್ಣ ಸಾಬೀತಾಗಿದೆ ಎಂದು ಮನದಟ್ಟಾದಾಗ ಆ ಕುರಿತಂತೆ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಶಿಫಾರಸನ್ನು ಸಕ್ಷಮ ಪ್ರಾಧಿಕಾರವು ಕಾಯ್ದೆಯ ನಿಯಮ 12(4)ರ ಅನ್ವಯ ಪರಿಶೀಲಿಸಿ ಮೂರು ತಿಂಗಳೊಳಗೆ ಕ್ರಮ ಕೈಗೊಂಡಿರುವ ಕುರಿತ ವರದಿಯನ್ನು ಲೋಕಾಯುಕ್ತ ಅಥವಾ ಉಪಲೋಕಾಯುಕ್ತಕ್ಕೆ ಕಳುಹಿಸಿಕೊಡಬೇಕು.
Related Articles
Advertisement
ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿ, ಶಿಸ್ತು ಕ್ರಮ ಕುರಿತಂತೆ ಲೋಕಾಯುಕ್ತರು ಮಾಡಿದ ಶಿಫಾರಸಿನ ಕುರಿತು ಸಕ್ಷಮ ಪ್ರಾಧಿಕಾರಿಗಳು ಕ್ರಮ ಕೈಗೊಳ್ಳುವಾಗ ಶಿಫಾರಸನ್ನು ಆರೋಪಿತ ನೌಕರರಿಗೆ ಕಳುಹಿಸಿಕೊಟ್ಟು ಅವರಿಂದ ಹೇಳಿಕೆ ಪಡೆಯಲು ಅವಕಾಶವಿಲ್ಲ. ಸಕ್ಷಮ ಪ್ರಾಧಿಕಾರವೇ ತನ್ನ ವಿವೇಚನೆ ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.