ದಾವಣಗೆರೆ: ಮೈಸೂರಿನ ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಯಲ್ಲಿ ಪ್ರಥಮ ವರ್ಷದ ಡಿಪಿಟಿ (ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ), ಡಿಪಿಎಂಟಿ (ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ) ಹಾಗೂ ಪಿಜಿಡಿಪಿಪಿಟಿಗೆ ಸೆಪ್ಟಂಬರ್ ಅಂತ್ಯದವರೆಗೆ ನೇರ ಪ್ರವೇಶ ಪಡೆಯಬಹುದು ಎಂದು ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯ ಉಪನ್ಯಾಸಕ ಲಕ್ಷ್ಮಣ್ ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಮೂರು ಕೋರ್ಸ್ ಗಳ ಪ್ರವೇಶಕ್ಕೆ ನಡೆಯಬೇಕಿದ್ದ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಹಾಗಾಗಿ ನೇರವಾಗಿ ಪ್ರವೇಶ ಪಡೆಯಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಭಾರತ ಸರ್ಕಾರದ ರಸಾಯನ, ಪೆಟ್ರೋ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ದೇಶದಲ್ಲಿ 35 ಸಂಸ್ಥೆಗಳಿವೆ. ಮೈಸೂರಿನ ಸಂಸ್ಥೆ 1991 ರಲ್ಲಿ ಪ್ರಾರಂಭವಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಅತೀ ಅಗತ್ಯವಾಗಿ ಬಳಕೆ ಮಾಡಲ್ಪಡುವಂತಹ ಪ್ಲಾಸ್ಟಿಕ್ ಉತ್ಪನ್ನಗಳ ಕುರಿತು ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಇಂದಿನ ವಾತಾವರಣದಲ್ಲಿ ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್ ಇಲ್ಲದೆ ಜೀವನ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ದಿನೆ ದಿನೇ ಅಧಿಕಗೊಳ್ಳುತ್ತಿದೆ. ಕೃಷಿ, ಆಟೋಮೊಬೈಲ್, ಶಿಕ್ಷಣ, ಸಾರಿಗೆ, ವಿದ್ಯುನ್ಮಾನ ಕ್ಷೇತ್ರಗಲ್ಲಿನ ಪ್ಲಾಸ್ಟಿಕ್ ತಂತ್ರಜ್ಞರ ಸಿದ್ಧಪಡಿಸಲಾಗುತ್ತಿದೆ. ನಮ್ಮಲ್ಲಿ ಅಭ್ಯಾಸ ಮಾಡಿದಂತಹವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗ ನಡೆಸುತ್ತಿದ್ದಾರೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು (ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ), ಡಿಪಿಎಂಟಿ(ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ) ಗೆ ಪ್ರವೇಶ ಪಡೆಯಬಹುದು. ಬಿಎಸ್ಸಿ ಪದವೀಧರರು ಪಿಜಿಡಿಪಿಪಿಟಿ(ಸ್ನಾತಕೋತ್ತರ ಪದವಿ) ಪ್ರವೇಶಾತಿಗೆ ಅರ್ಹರು. ಸಿಪೆಟ್‌ನಲ್ಲಿ ವ್ಯಾಸಂಗ ಮಾಡಿದವರಿಗೆ ಶೇ.100 ರಷ್ಟು ಉದ್ಯೋಗವಕಾಶ ಪಕ್ಕ. ವಿದ್ಯಾರ್ಥಿ ವೇತನ ಇತರೆ ಸೌಲಭ್ಯ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗೆ 0821-2510349, ಮೊ: 91410-75968ಗೆ ಸಂಪರ್ಕಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಡಿ.ಎಸ್. ಶ್ರೀನಾಥ್, ಸದಾಶಿವಪ್ಪ ಇದ್ದರು.