Advertisement

ಸಂಘಟನೆಗಳು ಗ್ರಾಮದ  ಅಭಿವೃದ್ಧಿಗೆ ಚಿಂತಿಸಲಿ: ವಿನೋದ್‌ ಕುಮಾರ್‌

03:06 PM Mar 31, 2017 | |

ಹಳೆಯಂಗಡಿ:  ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಸರಕಾರಿ ಯೋಜನೆಗಳನ್ನೆ ಕಾಯದೆ, ಮೂಲ ಸೌಕರ್ಯದಲ್ಲಿ ಸ್ವಾವಲಂಬಿಯಾಗುವ ಸೇವಾ ಮನೋ ಭಾವವನ್ನು ಬೆಳೆಸಬೇಕು. ಅಂಥ  ಸಂಸ್ಥೆಗಳಿಗೆ ಗ್ರಾಮಸ್ಥರೇ  ಆಸರೆಯಾಗುತ್ತಾರೆ ಎಂದು  ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಹೇಳಿದರು.

Advertisement

ಅವರು ಹಳೆಯಂಗಡಿ ಬಳಿಯ ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವದ ಯೋಜನೆಯಲ್ಲಿ  ವಿವಿಧ ಸಂಸ್ಥೆಗಳ ಜಂಟಿ ಸಂಯೋಜನೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಕಿಂಡಿಅಣೆಕಟ್ಟಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಡುಪಣಂಬೂರು ಗ್ರಾ.ಪಂ.  ಅಧ್ಯಕ್ಷ ಮೋಹನ್‌ದಾಸ್‌  ಮಾತನಾಡಿ, ಮಹಾತ್ಮಾಗಾಂಧಿಧಿ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮದ ಅಭಿವೃದ್ಧಿಗೆ ಪಂಚಾಯತ್‌  ಸಂಪೂರ್ಣ ಸಹಕಾರ ನೀಡಲಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಮಾದರಿಯಾಗಿದೆ ಎಂದರು.

ತಾ.ಪಂ. ಸದಸ್ಯ ದಿವಾಕರ ಕರ್ಕೇರ ಮಾತನಾಡಿ, ಗ್ರಾಮದ ಅಂತರ್ಜಲ ವೃದ್ಧಿಸಲು ಜಲ ಸಂರಕ್ಷಣೆಯ ಮೂಲಕ ಗ್ರಾಮದ ಕುಡಿ ಯುವ ನೀರಿನ ಬವಣೆ ಬಗ್ಗೆ ಕಾಳಜಿ ವಹಿಸ ಬೇಕಾದ ತುರ್ತು  ಆವಶ್ಯಕತೆ ಇದೆ ಎಂದರು.

ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವ  ಸಮಿತಿ ಮತ್ತು ಮಹಿಳಾ ಮಂಡಳಿ ಹಾಗೂ ವಿಶ್ವಬ್ಯಾಂಕ್‌ ಕುಡಿಯುವ ನೀರು ಸರಬರಾಜು  ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಜಂಟಿ ಆಶ್ರಯದಲ್ಲಿ ಈ ಕಿಂಡಿಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ.

Advertisement

ಪಡುಪಣಂಬೂರು ಗ್ರಾ. ಪಂ. ಸದಸ್ಯರಾದ ಹೇಮಂತ್‌ ಅಮೀನ್‌, ಸಂತೋಷ್‌ಕುಮಾರ್‌, ದಿನೇಶ್‌ ಕುಲಾಲ್‌, ಲೀಲಾ ಬಂಜನ್‌, ಸಂಪಾವತಿ, ಪುಷ್ಪಾ, ವನಜಾ, ವಿಶ್ವಬ್ಯಾಂಕ್‌ ಕುಡಿಯುವ ನೀರು ಸರಬರಾಜು  ಮತ್ತು ಪರಿಸರ ನೈರ್ಮಲ್ಯ ಸಮಿತಿಯ ದಾಮೋದರ ಶೆಟ್ಟಿ, ಪಿ.ಸಿ.ಕೋಟ್ಯಾನ್‌, ಟಿ.ಜಿ.ಭಂಡಾರಿ, ರಮೇಶ್‌ ದೇವಾಡಿಗ, ಯುವಕ ಸಂಘದ ಸ್ಥಾಪಕ ಸದಸ್ಯರಾದ ಎಲ್‌.ಕೆ.ಸಾಲ್ಯಾನ್‌, ಸುಂದರ ಸಾಲ್ಯಾನ್‌, ಹಿಂದೂ ಜಾಗರಣ ವೇದಿಕೆಯ ಲೋಕನಾಥ್‌, ಧ.ಗ್ರಾ.ಯೋಜನ ಒಕ್ಕೂಟದ ಕರುಣಾಕರ ಶೆಟ್ಟಿಗಾರ್‌, ಗ್ರಾಮಸ್ಥರಾದ ವಿನೋದ್‌ಕುಮಾರ್‌, ವಿಜಯಕುಮಾರ್‌ ರೈ, ಸುಂದರ ಭಂಡಾರಿ, ಸುಬ್ರಹ್ಮಣ್ಯ ರಾವ್‌, ಪುರುಷೋತ್ತಮ ರಾವ್‌,  ಮಧುಸೂಧನ್‌ ಭಟ್‌, ಪದ್ಮನಾಭ, ಪ್ರಶಾಂತ್‌ಕುಮಾರ್‌ ಬೇಕಲ್‌, ಶೀನ ದೇವಾಡಿಗ ಉಪಸ್ಥಿತರಿದ್ದರು.

ಯುವಕ ಸಂಘದ ಅಧ್ಯಕ್ಷ ಹರಿದಾಸ್‌ ಭಟ್‌ ಸ್ವಾಗತಿಸಿ,   ಪ್ರಸ್ತಾವನೆಗೈದರು,  ಮಹಿಳಾ ಸಂಘದ ಅಧ್ಯಕ್ಷೆ ವಿನೋದಾ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next