Advertisement

ಅರಮನೆಯೊಳಗಿನ ಕಿತ್ತಳೆ ಮರದ ರಹಸ್ಯ

10:10 AM Apr 12, 2019 | Hari Prasad |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ

Advertisement

ಅರಮನೆ ಎಂದರೆ ವಜ್ರ ವೈಢೂರ್ಯಗಳಿಂದ ಅಲಂಕೃತಗೊಂಡ ಸಿಂಹಾಸನ, ಕೊಪ್ಪರಿಗೆ ತುಂಬಾ ಬಂಗಾರದ ಆಭರಣಗಳು, ರಾಜಾಸ್ಥಾನ, ಅಂತಃಪುರ, ಸುಂದರ ಉದ್ಯಾನವನ, ಸುವಾಸನಾಯುಕ್ತ ಗಾಳಿ ಮುಂತಾದ ಶ್ರೀಮಂತ ಸುಮಧುರ ಕಲ್ಪನೆ ಕಣ್ಣಮುಂದೆ ಬರುತ್ತದೆ. ಆದರೆ, ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ 17 ಶತಮಾನದ ವರ್ಸ್ಯೆಲ್ಸ್‌ ಅರಮನೆಯದಾಗಿತ್ತು. ಇಂದು ಈ ಅರಮನೆ ಅದ್ಧೂರಿತನ ಮತ್ತು ವಾಸ್ತುಶಿಲ್ಪದ ಕಾರಣ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, 17ನೇ ಶತಮಾನದಲ್ಲಿ ಹಾಗಿರಲಿಲ್ಲ. ಅರಮನೆಯಲ್ಲಿ ಶೌಚಾಲಯಗಳ ಕೊರತೆ ಇದ್ದವಂತೆ. ಹೀಗಾಗಿ ಅರಮನೆಗೆ ಬಂದವರು ಸಿಕ್ಕ ಸಿಕ್ಕ ಮೂಲೆಗಳೆಲ್ಲಾ ಶೌಚಕ್ಕೆ ಹೋಗುತ್ತಿದ್ದರಂತೆ. ಎರಡು ದಿನಗಳಿಗೊಮ್ಮೆ ಶೌಚವನ್ನು ಶುಚಿಗೊಳಿಸಲೆಂದೇ ಪ್ರತ್ಯೇಕ ಸೇವಕರನ್ನು ನೇಮಿಸಲಾಗಿತ್ತು. ಆದರೆ, ಇದರಿಂದ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅರಮನೆಯಲ್ಲಿ ಪ್ರತಿನಿತ್ಯ ಔತಣಕೂಟಗಳಿರುತ್ತಿದ್ದುದರಿಂದ ಶೌಚಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಅರಮನೆ ಗಬ್ಬು ನಾತ ಬೀರುತ್ತಿತ್ತು. ರಾಜ 14ನೇ ಲೂಯಿ ಪ್ರತಿನಿತ್ಯ ಶುಚಿಗೊಳಿಸುವಂತೆ ಆಜ್ಞೆ ಮಾಡಿದ. ಅಲ್ಲದೆ, ದುರ್ನಾತವನ್ನು ಮರೆಮಾಚಲು ಕಿತ್ತಳೆ ಮರಗಳನ್ನು ಅರಮನೆ ಒಳಗೆ ಬೆಳೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next