Advertisement

ದಾಲ್ಚಿನ್ನಿ ದರ್ಬಾರ್‌

06:58 PM Oct 15, 2019 | mahesh |

ಪ್ರಾಚೀನ ಕಾಲದಿಂದಲೂ ದಾಲಿcನ್ನಿಯನ್ನು ಮಸಾಲೆ ಪದಾರ್ಥವನ್ನಾಗಿ ಉಪಯೋಗಿಸುತ್ತಿದ್ದೇವೆ. 20-40 ಅಡಿ ಎತ್ತರ ಬೆಳೆಯುವ ಈ ಮರದ ತವರೂರು ಕೇರಳ ಮತ್ತು ಶ್ರೀಲಂಕಾ ಎನ್ನುತ್ತಾರೆ. ಎಲೆಯನ್ನು ಪಲಾವ್‌ ಎಲೆ ಎಂದೂ, ಮರದ ತೊಗಟೆಯನ್ನು ಚಕ್ಕೆ ಎಂದೂ ಉಪಯೋಗಿಸುವ ಅನೇಕರಿಗೆ, ದಾಲಿcನ್ನಿ ಚಕ್ಕೆಯ ಔಷಧೀಯ ಗುಣಗಳು ತಿಳಿದಿಲ್ಲ. ಈ ಮಸಾಲಾ ಪದಾರ್ಥಕ್ಕೆ, ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯೂ ಇದೆ.

Advertisement

1. ಒಂದು ಬಟ್ಟಲು ನೀರಿಗೆ, ಅರ್ಧ ಚಮಚ ದಾಲಿcನ್ನಿ ಚಕ್ಕೆ ಪುಡಿ, ಕಾಳು ಮೆಣಸಿನ ಪುಡಿ ಬೆರೆಸಿ ಕುದಿಸಿ, ನಂತರ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ.

– ಶೀತ, ಕೆಮ್ಮು, ನೆಗಡಿ ಗುಣವಾಗುತ್ತದೆ.
-ಹೊಟ್ಟೆ ಹುಣ್ಣಿಗೆ ರಾಮಬಾಣ.
– ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
-ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.

2. ದಾಲ್ಚಿನ್ನಿ ಚಕ್ಕೆಯನ್ನು ಲಿಂಬೆರಸದಲ್ಲಿ ತೇಯ್ದು –
-ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಟಾನ್ಸಿಲ…, ಗಂಟಲುನೋವು ಕಡಿಮೆಯಾಗುತ್ತದೆ.
-ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆ ಮಾಯವಾಗುತ್ತದೆ.

3. ಒಂದು ಲೋಟ ಹಾಲಿಗೆ ಅರ್ಧ ಚಮಚ ದಾಲಿcನ್ನಿ ಪುಡಿ ಹಾಕಿ, ಕುದಿಸಿ ಕುಡಿದರೆ
-ಜೀರ್ಣ ಶಕ್ತಿ ವೃದ್ಧಿಸುತ್ತದೆ.
-ವಾಯು ಪ್ರಕೋಪವನ್ನು ತಡೆಯುತ್ತದೆ.
-ತೂಕವಿಳಿಸಲು, ಕೊಬ್ಬು ಕರಗಿಸಲು ಸಹಕಾರಿ.
-ಚರ್ಮದ ಸೋಂಕು ನಿವಾರಿಸುತ್ತದೆ.
-ರಾತ್ರಿ ಮಲಗುವುದಕ್ಕೆ ಮುನ್ನ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

Advertisement

4. ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ…
-ಉಬ್ಬಸ ರೋಗಿಗಳು ಪ್ರತಿನಿತ್ಯ ಮೂರು ಬಾರಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.

5. ದಾಲ್ಚಿನ್ನಿ ತೈಲ
– ವಸಡಿಗೆ ಹಚ್ಚಿದರೆ ಹಲ್ಲುನೋವು ಕಡಿಮೆ ಆಗುತ್ತದೆ.
-ಕ್ಷಯದ ಗಾಯಗಳಿಗೆ ಲೇಪಿಸಿದರೆ, ಶೀಘ್ರವಾಗಿ ಉಪಶಮನವಾಗುತ್ತದೆ.

-ಗೀತಾ ಎಸ್‌. ಭಟ್ಕಳ

Advertisement

Udayavani is now on Telegram. Click here to join our channel and stay updated with the latest news.

Next