Advertisement
ಇದಕ್ಕೂ ಮೊದಲು ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಶಶಿಕಲಾ ಮತ್ತು ದಿನಕರನ್ ಪಕ್ಷದಲ್ಲಿ ಯಾವುದೇ ಹಂತದಲ್ಲಿ ಇರಬಾರದು ಎಂದು ಹೇಳಿದ್ದರು. ಹೀಗಿದ್ದರೆ ಮಾತ್ರ ಮುಖ್ಯಮಂತ್ರಿ ಪಳನಿಸ್ವಾಮಿಗೆ ನಿಷ್ಠರಾಗಿರುವ ನಾಯಕರ ನೇತೃತ್ವದ ಸಮಿತಿ ಜತೆಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಜತೆಗೆ ದಿ.ಜಯ ಲಲಿತಾ ಅವರ ಸಾವಿನ ಬಗ್ಗೆ ಸಂದೇಹಗಳು ಇವೆ. ಅವುಗಳ ನಿವಾರಣೆಗಾಗಿ ತನಿಖೆ ನಡೆಸ ಬೇಕು ಎಂದು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ದಿನಕರನ್‌ಗೆ ಆಮೂಲಾಗ್ರ ಮಾಹಿತಿಯನ್ನೂ ನೀಡಲಾಗಿತ್ತು.ಈ ನಡುವೆ ನವದೆಹಲಿಯಲ್ಲಿ 50 ಕೋಟಿ ರೂ. ಡೀಲ್‌ಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಸುಕೇಶ್ ಚಂದ್ರಶೇಖರನ್‌ನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ವಿಶೇಷ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ. ಆತ 25ರ ವರೆಗೆ ದೆಹಲಿ ಪೊಲೀಸ್ ವಶದಲ್ಲಿ ಇರಲಿದ್ದಾನೆ.