Advertisement

ನಟನೆಗೆ ಅವಕಾಶ : ಮಾರ್ಚ್‌ 30ರಂದು ಮಂಗಳೂರಿನಲ್ಲಿ ಆಡಿಷನ್‌

09:31 AM Mar 29, 2019 | Hari Prasad |

ವರುಣ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕನ್ನಡ ಚಿತ್ರವೊಂದಕ್ಕೆ ನಟನಟಿಯರ ಹುಡುಕಾಟ ನಡೆಯುತ್ತಿದೆ. ಹೀರೋ ಹೀರೋಯಿನ್, ಪೋಷಕ ಮತ್ತು ಹಾಸ್ಯ ಸಹಿತ ಎಲ್ಲಾ ಪಾತ್ರಗಳಿಗೆ ಹೊಸ ಮುಖಗಳ ಹುಡುಕಾಟದಲ್ಲಿ ಚಿತ್ರತಂಡವಿದೆ.

Advertisement

ಇದೇ ಮಾರ್ಚ್ 30ರ ಶನಿವಾರದಂದು, ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ನಲ್ಲಿ (ಲಯನ್ಸ್ ಸೇವಾ ಮಂದಿರ) ಆಸಕ್ತರಿಗೆ ಆಡಿಷನ್ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಈ ಪ್ರಕ್ರಿಯೆ ಇರಲಿದ್ದು, 6 ರಿಂದ 60 ವರ್ಷದ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ‌.

‘ವಿಭಿನ್ನ ಮ್ಯಾನರಿಸಂ, ಆಕರ್ಷಕ ನಟನಾ ಶೈಲಿ, ಉತ್ಸಾಹ ಭರಿತ ಹೊಸಮುಖಗಳು ನಮ್ಮ ಚಿತ್ರಕ್ಕೆ ಬೇಕಾಗಿದೆ. ಹೀರೋ, ಹೀರೋಯಿನ್‌ ಮಾತ್ರವಲ್ಲದೇ ಪೋಷಕ ಪಾತ್ರಗಳಿಗೂ ಆಡಿಷನ್ಸ್‌ ನಡೆಯಲಿದೆ. ಸರಳ ಕಥಾ ಹಂದರವನ್ನು ಹೊಂದಿರುವ ಸುಂದರ ಚಿತ್ರ ಇದಾಗಿದ್ದು ಉತ್ತಮ ತಂತ್ರಜ್ಞರ ತಂಡ ಈಗಾಗಲೇ ಪ್ರಿ-ಪ್ರೊಡಕ್ಷನ್‌ ಹಂತದ ಕೆಲಸದಲ್ಲಿ ನಿರತವಾಗಿದೆ’ ಎಂಬುದು ಈ ಸಿನೆಮಾ ತಂಡದ ಹೇಳಿಕೆಯಾಗಿದೆ. ಇನ್ನುಳಿದ ಮಾಹಿತಿಗಳನ್ನು ಮುಂಬರುವ ದಿನಗಳಲ್ಲಿ ಬಹಿರಂಗಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next