Advertisement

ಸಿನಿಮೀಯವಾಗಿ ಪಾರು

06:40 AM Dec 23, 2018 | Team Udayavani |

ಶಾರ್ಜಾ:  ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕಿದ್ದ ತನ್ನ ಭಾವಚಿತ್ರಕ್ಕೆ ಹಲವರು ಟೀಕೆ ವ್ಯಕ್ತಪಡಿಸಿದ ಕಾರಣ, ಆತ್ಮಹತ್ಯೆಗೆ ಸಜ್ಜಾಗಿದ್ದ  ಭಾರತೀಯ ಮೂಲದ 20ರ‌ ಯುವತಿಯನ್ನು ದುಬೈ ಪೊಲೀಸರು ರಕ್ಷಿಸಿದ್ದಾರೆ. ತನ್ನ ಸಾವನ್ನು ಜಾಲತಾಣದಲ್ಲಿ ನೇರಪ್ರಸಾರ ಮಾಡುವುದಾಗಿ ಶುಕ್ರವಾರ ಮಧ್ಯಾಹ್ನವೇ ಆಕೆ ಪ್ರಕಟಿಸಿದ್ದಳು. ಇದು ವೈರಲ್‌ ಆಗಿ ಶಾರ್ಜಾ ಸೈಬರ್‌ ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣವೇ ಅವರು ದುಬೈನಲ್ಲಿರುವ ಸೈಬರ್‌ ಪೊಲೀಸರಿಗೆ ಮಾಹಿತಿ ಕೊಟ್ಟರು. ಮಧ್ಯರಾತ್ರಿಯ ಹೊತ್ತಿಗೆ ಆಕೆಯ ಮನೆ ಪತ್ತೆ ಹಚ್ಚಿ ಬಾಗಿಲು ಒಡೆದು ಒಳ ಹೋದಾಗ ಆಕೆ ಆತ್ಮಹತ್ಯೆಗೆ ಸಿದ್ಧಳಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next