Advertisement

“ಸಿನೆಮಾಗಳು ದಾರಿ ತಪ್ಪಿಸುವಂತಿರಬಾರದು’

09:44 PM Apr 10, 2019 | Team Udayavani |

ನೆಹರೂನಗರ: ಚಲನಚಿತ್ರವು ಒಂದು ಪರಿಣಾಮಕಾರಿ ಮಾಧ್ಯಮ. ಸಿನೆಮಾಗಳಲ್ಲಿ ವಾಸ್ತವತೆ ಮುಖ್ಯ. ಜನರನ್ನು ದಾರಿ ತಪ್ಪಿಸುವಂತಹ ಸನ್ನಿವೇಶಗಳು ಸಿನೆಮಾದಲ್ಲಿ ಇರಬಾರದು ಎಂದು ವಿವೇಕಾನಂದ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶಂಕರನಾರಾಯಣ ಭಟ್‌ ಹೇಳಿದರು.

Advertisement

ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳು ನಿರ್ಮಿಸಿದ ಸಮರ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಇರಬೇಕು. ಸೃಜನಶೀಲತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ನಾವು ಕೈಗೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲೂ ಜನರಿಗೆ ಸಂದೇಶವನ್ನು ನೀಡಬೇಕು. ಇದರ ಮುಖಾಂತರ ಸಮಾಜಕ್ಕೆ ಉತ್ತಮ ಮಾಹಿತಿ ರವಾನೆ ಯಾಗಬೇಕು ಎಂದರು.

ಅಭಿವ್ಯಕ್ತಿ ಮಾಧ್ಯಮ
ಕಿರುಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ| ವೆಂಕಟರಮಣ ಭಟ್‌ ಮಾತನಾಡಿ, ಸಿನೆಮಾ ಒಂದು ಅಭಿವ್ಯಕ್ತಿ ಮಾಧ್ಯಮ. ಬಹಳ ಪ್ರಬಲವಾಗಿ ಅಂದುಕೊಂಡ ವಿಷಯ ವನ್ನು ದೃಶ್ಯ ಹಾಗೂ ಶ್ರವ್ಯ ಮಾಧ್ಯಮದಲ್ಲಿ ಹೇಳುವುದೇ ಸಿನೆಮಾ ಎಂದರು.

ಕಿರುಚಿತ್ರದ ನಿರ್ದೇಶಕ ತೃತೀಯ ಬಿಬಿಎ ವಿದ್ಯಾರ್ಥಿ ಪ್ರೇಮ್‌ರಾಜ್‌ ಮಾತನಾಡಿ, ಕೆಲವೇ ಮಂದಿಯಿಂದ ಶುರುವಾದ ರಾಯಲ್‌ ಕ್ರಿಯೇಷನ್ಸ್‌ ಎನ್ನುವ ತಂಡ ಇದೀಗ ಸದೃಢವಾಗಿ ಬೆಳೆದಿದೆ. ಮಾದರಿಯಾಗುವಂತಹ ವಿಷಯ ವನ್ನಿಟ್ಟುಕೊಂಡು ಸಮರ ಚಿತ್ರವನ್ನು ಮಾಡಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅಧ್ಯಕ್ಷತೆ ವಹಿಸಿದ್ದರು. ಕಿರುಚಿತ್ರದ ಸಂಕಲನಕಾರ ತೃತೀಯ ಬಿಬಿಎ ವಿದ್ಯಾರ್ಥಿ ಬ್ರಿಜೇಶ್‌ ಉಪಸ್ಥಿತರಿದ್ದರು.

ವಿದ್ಯಾರ್ಥಿ ಶ್ರೀಕಾಂತ್‌ ಪೂಜಾರಿ ಸ್ವಾಗತಿಸಿ, ವಿದ್ಯಾರ್ಥಿನಿ ಸತ್ಯಶ್ರೀ ವಂದಿಸಿ, ವಿದ್ಯಾರ್ಥಿ ಅಖೀಲೇಶ್‌ ಟಿ. ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next