Advertisement

ಸಾವೊ ಪಾಲೊ : ಕಾರಲ್ಲೇ ಕೂತು ಸಿನೆಮಾ ನೋಡುವ ಮಜಾ

02:59 PM Jun 28, 2020 | sudhir |

ಸಾವೊ ಪಾಲೊ : ಕೋವಿಡ್‌-19ನಿಂದ ಕ್ರೀಡೆಗಳಿಂದ ಹಿಡಿದು ಸಿನೆಮಾ ಇತ್ಯಾದಿ ಮನೋರಂಜನ ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದಿದ್ದೆ. ಒಂದು ಹಂತಕ್ಕೆ ಎಲ್ಲ ದೇಶಗಳು ಆನ್‌ಲಾಕ್‌ ಆದರೂ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಇನ್ನು ಲಾಕ್‌ ಆಗಿವೆ.
ಈ ನಡುವೆ ಬ್ರೆಜಿಲ್‌ ದೇಶ ವಿಭಿನ್ನ ರೀತಿಯಲ್ಲಿ ಚಲನಚಿತ್ರ ವೀಕ್ಷಣಾ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ವಿಶೇಷ ಗಮನ ಸೆಳೆದಿದೆ.

Advertisement

ಸಾವೊ ಪೌಲೊದ ಸಾಕರ್‌ ಕ್ರೀಡಾಂಗಣದಲ್ಲಿ ನಡೆಸಲಾಗುವ ಮನರಂಜನಾ ಡ್ರೈವ್‌-ಇನ್‌ ಸಂಸ್ಕೃತಿ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಕೋವಿಡ್‌-19 ಬಿಕ್ಕಟ್ಟಿನ ನಡುವೆಯೂ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಮನರಂಜನಾ ಡ್ರೈವ್‌ – ಇನ್‌ ಕಾರ್ಯಕ್ರಮ ವ್ಯಾಪಕವಾಗಿ ಬೆಳೆಯುತ್ತಿದ್ದು, ಜನ ಕಾರಿನಲ್ಲಿ ಕುಳಿತುಕೊಂಡೇ ಬೃಹತ್‌ ಪರದೆಯ ಮೇಲೆ ಚಲನಚಿತ್ರ ವೀಕ್ಷಿಸಬಹುದಾಗಿದೆ. ವಿಶೇಷವೆಂದರೆ ಈ ಕ್ರೀಡಾಂಗಣದಲ್ಲಿ ಸುಮಾರು 300 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸ ಬಹುದಾಗಿದ್ದು, ಪಿಚ್‌ಗಳನ್ನು ಬಳಸಿಕೊಂಡು ಉತ್ತಮ ಧ್ವನಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಿದೆ .

ಕೋವಿಡ್‌-19 ಬಿಕ್ಕಟ್ಟಿನ ಸಮಯದಲ್ಲೂ ಪಾಲ್ಮೇರಾಸ್‌ನ ಸಾಕರ್‌ ಕ್ಲಬ್‌ ಅದರ ಚಟುವಟಿಕೆಗಳನ್ನು ನಿಲ್ಲಿಸದೇ, ಆರ್ಥಿಕತೆಗೆ ಸಹಾಯ ಮಾಡುವಲ್ಲಿ ಮನರಂಜನಾ ಉದ್ಯಮವು ಕೊಡುಗೆ ನೀಡುತ್ತಿದೆ.

ಯಾವುದೇ ಸಮಯದಲ್ಲಿ ಎಂತಹ ಪರಿಸ್ಥಿತಿ ಬೇಕಾದರೂ ಎದುರಾಗಬಹುದೆಂಬ ಪಾಠವನ್ನು ಸದ್ಯದ ಪರಿಸ್ಥಿತಿ ಮನದಟ್ಟು ಮಾಡಿಸಿದ್ದು, ಎಲ್ಲ ಸಂದರ್ಭಗಳಿಗೆ ಹೊಂದುಕೊಂಡು ಹೋಗಬೇಕು ಎಂಬುದನ್ನು ಕೋವಿಡ್‌-19 ಸೃಷ್ಟಿಸಿರುವ ಬಿಕ್ಕಟ್ಟು ಅರ್ಥಮಾಡಿಸಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವಾಸಿಯೊಬ್ಬರು ತಿಳಿಸಿ¨ªಾರೆ.

ಇನ್ನು ಕಾರ್ಯಕ್ರಮದಲ್ಲಿ ಕ್ಲಾಸಿಕ್‌ ಚಲನಚಿತ್ರಗಳು, ಪ್ರದರ್ಶನಗಳು, ಸ್ಟ್ಯಾಂಡ್‌ – ಅಪ್‌ ಕಾಮಿಡಿ ಮತ್ತು ಮಕ್ಕಳ ರಂಗಮಂದಿರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಜೂನ್‌ 24ರಂದು ಪ್ರಾರಂಭಗೊಂಡಿರುವ ಈ ಕಾರ್ಯಕ್ರಮ ಜುಲೈ 19ರವರೆಗೆ ನಡೆಯಲಿದೆ. ಗರಿಷ್ಠ ನಾಲ್ಕು ಜನರಿರುವ ಒಂದು ಕಾರಿನ ಟಿಕೆಟ್‌ ಬೆಲೆ 23 ರಿಂದ 100 ಡಾಲರ್‌ಗಳವರೆಗೆ ಇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next