Advertisement

Cinema: ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಇರುವುದಿಲ್ಲ!

05:36 PM Sep 11, 2024 | Team Udayavani |

ಚಿತ್ರರಂಗಕ್ಕೆ ಬರುವ ಹೊಸಬರು ಒಂದಷ್ಟು ವಿಭಿನ್ನ ಟೈಟಲ್‌ ಮೊರೆ ಹೋಗುತ್ತಿದ್ದಾರೆ. ಈ ಸಾಲಿಗೆ ಸೇರುವ ಸಿನಿಮಾ ‘ಈ ಸಿನಿಮಾಗೆ ಕ್ಲೈಮ್ಯಾಕ್ಸ್‌ ಇರುವುದಿಲ್ಲ’. ಹೀಗೊಂದು ಟೈಟಲ್‌ನ ಸಿನಿಮಾಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಆರ್‌.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗೋವಾಗೆ ಟ್ರಿಪ್‌ ಹೊರಡುವ 6 ಜನ ಹುಡುಗ, ಹುಡುಗಿಯರ ಜೀವನದಲ್ಲಿ ಆಗಂತುಕನೊಬ್ಬ ಬಂದಾಗ ಅವರಿಗೆ ಎದುರಾದಾಗ ಸಂಕಷ್ಟಗಳು ಹಾಗೂ ಅವುಗಳನ್ನು ಆ ಸ್ನೇಹಿತರು ಹೇಗೆ ಎದುರಿಸುತ್ತಾರೆ ಎಂಬುದನ್ನು ಈ ಸಿನಿಮಾಗೆ ಕ್ಲೈಮ್ಯಾಕ್ಸ್‌ ಇರುವುದಿಲ್ಲ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ‌

Advertisement

ಈ ಚಿತ್ರದಲ್ಲಿ ಬಾಹುಬಲಿ ಸಿನಿಮಾದ ಕಾಲಕೇಯ ಖ್ಯಾತಿಯ ಪ್ರಭಾಕರ್‌ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಹರಿ ಬಂಗಾರಪೇಟೆ, ದೀನ ಉಪ್ಪಾಡ, ರಾಮ್‌ ಜನಾರ್ದನ್‌, ರೂಪಶ್ರೀ, ಅಶೋಕ್‌ ರೆಡ್ಡಿ, ದೇವರಾಜ್, ಎಂ ವಿ. ಸಮಯ್, ಬಲರಾಂ ಮೊದಲಾದವರು ನಟಿಸುತ್ತಿದ್ದಾರೆ. ಎರಡೂವರೆ ಗಂಟೆಯ ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್‌ ಇರುವುದಿಲ್ಲ, ಆದರೆ ಸಿನಿಮಾ ನೋಡಿದ ನಂತರ ಪ್ರೇಕ್ಷಕರೇ ಚಿತ್ರಕ್ಕೊಂದು ಒಳ್ಳೆಯ ಕ್ಲೈಮ್ಯಾಕ್ಸ್‌ ನೀಡಬೇಕೆಂದು ನಿರ್ದೇಶಕರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next