Advertisement

Cinema: ತಂದೆಯ ಕಾಸಲ್ಲಿ ಮಗನ ರೈಡ್‌

05:04 PM Sep 11, 2024 | Team Udayavani |

‘ರೈಡ್‌’ ಎಂಬ ಚಿತ್ರವೊಂದು ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡು ಹಾಗೂ ಟ್ರೇಲರ್‌ ಬಿಡುಗಡೆಯಾಯಿತು.

Advertisement

ರಾಮಕೃಷ್ಣ ರಾಮೋಹಳ್ಳಿ ಅವರು ನಿರ್ಮಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ನಾಯಕನಟನಾಗಿ ಚಿತ್ರರಂಗ ಪ್ರವೇಶ ಮಾಡಿಸುತ್ತಿದ್ದಾರೆ. ನೂತನ ಪ್ರತಿಭೆ ತನ್ವಿ ರೈಡ್‌ ಚಿತ್ರದ ನಾಯಕಿ. ನೀರಜ್‌ ಕುಮಾರ್‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾನುತೇಜ ಈ ಚಿತ್ರದ ನಿರ್ದೇಶಕರು. ಇದೊಂದು ಥ್ರಿಲ್ಲರ್‌ ಕಥಾಹಂದರ ಹೊಂದಿರುವ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ.

ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ ರೈಡ್‌ ಗೆ ಹೋಗುತ್ತಾರೆ. ಆ ರೈಡ್‌ನ‌ಲ್ಲಿ ಹಲವು ತಿರುವುಗಳಿರುತ್ತದೆ. ಇದೇ ಚಿತ್ರದ ಕಥಾಹಂದರ ಎನ್ನುವುದು ತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next