Advertisement

Panaji: ಗೋವಾದಲ್ಲಿ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಬೇಕು

11:48 AM Nov 25, 2023 | Team Udayavani |

ಪಣಜಿ: ಗೋವಾದಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದಾಗ, ಗೋವಾದ ಕಲಾವಿದರಿಗೆ ವೇದಿಕೆ ಸಿಗುತ್ತದೆ. ಚಿತ್ರೋದ್ಯಮ ಇಲ್ಲಿ ಅಭಿವೃದ್ಧಿಯಾದರೆ, ಗೋವಾದ ನಟರು ಈ ಕ್ಷೇತ್ರದಲ್ಲಿ ಪೂರ್ಣಾವಧಿಗೆ ಬರುತ್ತಾರೆ. ಇದಕ್ಕಾಗಿ ಗೋವಾದಲ್ಲಿ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮೊಗ್ ಚಿತ್ರದ ಪ್ರೊಡಕ್ಷನ್ ಎಡಿಟರ್ ಜೊಜೊ ಡಿಸೋಜಾ ಮನವಿ ಮಾಡಿದರು.

Advertisement

ಗೋವಾದಲ್ಲಿ ನಡೆಯುತ್ತಿರುವ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯೂತ್ ಹಾಸ್ಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೊಂಕಣಿ ಮಾತನಾಡುವವರ ಸಂಖ್ಯೆ ಸುಮಾರು 8 ಲಕ್ಷ. ಅವರಲ್ಲಿ 2 ರಿಂದ 3 ಲಕ್ಷ ನಾಗರಿಕರು ಈ ಚಿತ್ರಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಕೊಂಕಣಿ ಚಿತ್ರಗಳಿಗೆ ಬೇಕಾದ ಪ್ರೇಕ್ಷಕರು ಸಿಗುತ್ತಿಲ್ಲ. ಇದಕ್ಕೆ ಪರಿಹಾರವೆಂಬಂತೆ ಮೊಗ್ ಚಿತ್ರ ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಿಗೆ ಡಬ್ ಆಗಲಿದ್ದು, ಕೊಂಕಣಿ ಸಿನಿಮಾಗಳಿಗೆ ತಕ್ಕಂತೆ ಇದೊಂದು ಹೊಸ ಪ್ರಯೋಗ ಎಂದು ದೀಪಕ್ ಬಾಂದೇಕರ್ ಹೇಳಿದ್ದಾರೆ.

ಈ ವರ್ಷ 7 ಕೊಂಕಣಿ ಚಿತ್ರಗಳು ಗೋವಾ ವಿಭಾಗದಲ್ಲಿ ಸ್ಥಾನ ಪಡೆದಿವೆ. ಈ ಎಲ್ಲಾ ಚಿತ್ರಗಳ ತಂಡಗಳು ಒಂದೇ ದಿನ ಅಂದರೆ ಶುಕ್ರವಾರ, 24 ರಂದು ಸತತವಾಗಿ ರೆಡ್ ಕಾರ್ಪೆಟ್ ಹೊಡೆಯಲು ಸಾಧ್ಯವಿಲ್ಲ ಪ್ರೊಡಕ್ಷನ್ ಎಡಿಟರ್, ಜೋಜೋ ಡಿಸೋಜಾ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next