ಬೆಂಗಳೂರು: ಕೋವಿಡ್ ಮಹಾಮಾರಿ ಹೊಡೆತಕ್ಕೆ ಸಿಕ್ಕಿ ತತ್ತರಿಸಿರುವ ಚಿತ್ರರಂಗ ಮತ್ತೆ ಪ್ರೇಕ್ಷಕರನ್ನು ಸೆಳೆಯುದಕ್ಕೆ ಮುಂದಾಗಿದೆ. ಈ ನಡುವೆ ಕನ್ನಡಿಗರೆಲ್ಲ ಒಟ್ಟಾಗಿ ‘ಸಿನಿಮಾ ನೋಡಿ . ಇನ್’ ಎಂಬ ಹೆಸರಿನೊಂದಿಗೆ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ.
ಲಾಕ್ ಡೌನ್ ಆರಂಭದ ಬಳಿಕ ಮಾಲ್ ಗಳು ಚಿತ್ರ ಮಂದಿರಗಳು, ಮಲ್ಟಿ ಪ್ಲಕ್ಸ್ ಗಳು ಸಂಪೂರ್ಣ ಮುಚ್ಚಿದ್ದು. ಹಲವಾರು ಚಿತ್ರಗಳು ತೆರೆ ಕಾಣದೆ, ಸಿನಿ ಜಗತ್ತನ್ನು ಚಿಂತೆಗೆ ತಳ್ಳಿವೆ. ನಿರ್ಮಾಪಕರುಗಳು, ನಿರ್ದೇಶಕರುಗಳನ್ನು ಒಳಗೊಂಡಂತೆ ನಟ- ನಟಿಯರ ಆತಂಕಕ್ಕೆ ಎಡೆಮಾಡಿದೆ.
ಇದನ್ನೂ ಓದಿ:ದೆಹಲಿ ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ
ಇತ್ತೀಚೆಗಷ್ಟೆ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ನಲ್ಲಿ ಸಡಿಲಿಕೆ ತಂದು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದ್ದರೂ, ಜನ ಚಿತ್ರ ಮಂದಿರಗಳತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಆರಂಭಗೊಂಡಿರುವ ಸಿನಿಮಾ ನೋಡಿ . ಇನ್ ಕನ್ನಡ ಚಿತ್ರರಂಗವನ್ನು ಮತ್ತೆ ತಲೆಯೆತ್ತುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ.
ಇದು ಹೂಡಿಕೆದಾರರು, ಡೆವಲಪರ್ ಗಳು ಹಾಗೂ ಸಿನಿ ಪ್ರಿಯರನ್ನು ಒಳಗೊಂಡಿದ್ದು, ಓ ಟಿ ಟಿ ಗಿಂತ ಭಿನ್ನವಾಗಿರುವುದು ವಿಶೇಷ. ಇಲ್ಲಿ ಅಡ್ವಾನ್ಸ್ ಕ್ಲೌಡ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ವೀಕ್ಷಕರು ಯಾವುದೇ ವಿಧವಾದ ಚಂದಾದಾರರಾಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಸಿನಿಮಾ ನೋಡಿ . ಇನ್ ಜಾಹಿರಾತು ಮುಕ್ತವಾಗಿದ್ದು, ವೀಕ್ಷಕರು ತಮ್ಮ ಇಚ್ಛೆಗೆ ತಕ್ಕಂತ ಸಿನಿಮಾ ನೋಡಲು ಅವಕಾಶವಿದೆ ಎಂದು ತಿಳಿಸಿದೆ.