Advertisement

ಮೊಬೈಲ್‌ನಲ್ಲಿ ಸಿನಿಮಾ ಚಿತ್ರೀಕರಣ: ವ್ಯಕ್ತಿ ಬಂಧನ

11:30 AM Dec 22, 2017 | |

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಅಂಜನಿಪುತ್ರ’ ಚಿತ್ರವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ಸಿಲ್ವರ್‌ ಜ್ಯೂಬಿಲಿ(ಎಸ್‌.ಜೆ.ಪಾರ್ಕ್‌) ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ. ಆನಂದ್‌ ಕುಮಾರ್‌(32) ಬಂಧಿತ.

Advertisement

ಕಬ್ಬನ್‌ ಪೇಟೆಯ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಒಟಿಸಿ ರಸ್ತೆಯಲ್ಲಿರುವ ಶಾರದಾ ಚಿತ್ರ ಮಂದಿರದಲ್ಲಿ ಸಿನಿಮಾ ನೋಡಲು ಬಂದಿದ್ದಾನೆ.  ಸಿನಿಮಾ ಆರಂಭವಾಗುತ್ತಿದ್ದಂತೆ ತನ್ನ ಮೊಬೈಲ್‌ ಮೂಲಕ ಸಿನಿಮಾವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಚಿತ್ರ ಮಂದಿರ ಸಿಬ್ಬಂದಿ ಹಾಗೂ ಇತರೆ ಪ್ರೇಕ್ಷಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next