Advertisement

ಸಿನಿಮಾ ಸ್ಕೂಲ್ ಶುರುವಾಗುತ್ತಿದೆ…ಬೇಗ ಹೋಗಿ ಸೇರಿಕೊಳ್ಳಿ!

10:39 AM Oct 06, 2019 | Naveen |

ಚಿತ್ರರಂಗಕ್ಕೆ ಬರಲು ಎಷ್ಟೋ ಜನ ಬಯಸಿರುತ್ತಾರೆ. ಆದರೆ ಕೆಲವರನ್ನಅಷ್ಟೇ ಅದು ಕೈ ಹಿಡಿದಿರುತ್ತದೆ. ಅದಕ್ಕೆ ಮೂಲ ಕಾರಣ ಮಾರ್ಗದರ್ಶನದ ಕೊರತೆ. ಹಾಗೆ ಗೈಡೆನ್ಸ್ ಇಲ್ಲದೆ ಯಾರೂ ಒದ್ದಾಡಬಾರದು ಎನ್ನುವ ಕಾರಣಕ್ಕೊ ಏನೋ ನಿರ್ಮಾಪಕ ತರುಣ್ ಶಿವಪ್ಪ ಎಲ್ಲರಿಗೂ ಅಗತ್ಯವಿರುವ ಹೊಸದೊಂದು ಯೋಜನೆಯನ್ನು ಆರಂಭಿಸುತ್ತಿದ್ದಾರೆ.

Advertisement


ನಿರ್ಮಾಪಕ ತರುಣ್ ಶಿವಪ್ಪ ಅವರ ಮುಂದಾಳತ್ವದಲ್ಲಿ, ಕಲಾಸಕ್ತ ಅಭ್ಯರ್ಥಿಗಳಿಗಾಗಿಯೇ ಹೊಸದೊಂದು ಸಿನಿಮಾ ಶಾಲೆ ಆರಂಭವಾಗುತ್ತಿದೆ. ಇದರ ಹೆಸರೇ `ಸಿನಿಮಾ ಸ್ಕೂಲ್’ ಚಿತ್ರರಂಗದ ಪ್ರತಿಯೊಂದು ವಿಭಾಗದ ಕೆಲಸ ಕಾರ್ಯಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಅದಕ್ಕೂ ಮುಂಚೆ ಯಾವ ಅಭ್ಯರ್ಥಿ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವುದನ್ನು ಆಯಾ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಸೂಚಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಿನಿಮಾರಂಗದ ವಿವಿಧ ವಿಭಾಗಗಳ ಕುರಿತು ನಿಯಮಿತವಾಗಿ ಕಲಿತು ತಮಗೊಪ್ಪುವ ಪ್ರೊಫೆಷನ್ ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಜನರಿಗೆ ಸಹಾಯವಾಗಲಿದೆ.


ತರುಣ್ ಟಾಕೀಸ್ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ರೋಜ್
, ಮಾಸ್ ಲೀಡರ್, ವಿಕ್ಟರಿ-2 ಥರದ ಸೂಪರ್ ಹಿಟ್ ಚಿತ್ರಗಳನ್ನು ಸೇರಿದಂತೆ ಈಗ ನಿರ್ಮಾಣ ಹಂತದಲ್ಲಿರುವ ಖಾಕಿ ಸಿನಿಮಾವನ್ನು ನಿರ್ಮಿಸಿರುವವರು ನಿರ್ಮಾಪಕ ತರುಣ್ ಶಿವಪ್ಪ. ಈಗ `ಸಿನಿಮಾ ಸ್ಕೂಲ್’ನ ಸೂತ್ರಧಾರರಾಗಿದ್ದಾರೆ.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ ತ್ತೈ ದು ವರ್ಷಗಳಿಂದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ, ಶಿವಾನಿ, ಮಿಂಚು, ಜುಲೈ22, 1947, ಇಂಗಳೆ ಮಾರ್ಗ, ಸಾವಿತ್ರಿ ಬಾಯಿ ಫುಲೆ, ಗೌರಿಪುತ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ವಿಶಾಲ್ ರಾಜ್ ಈ `ಸಿನಿಮಾ ಸ್ಕೂಲ್’ಗೆ ಪ್ರಾಂಶುಪಾಲರಾಗಿದ್ದಾರೆ. ಅನುಭವೀ ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಸಿನಿಮಾದಲ್ಲಿ ಹೆಸರು ಮಾಡಿದವರು, ರಂಗಕರ್ಮಿಗಳು `ಸಿನಿಮಾ ಸ್ಕೂಲ್’ ನಲ್ಲಿ ತರಬೇತಿ, ಉಪನ್ಯಾಸ ನೀಡಲಿದ್ದಾರೆ. ಸದ್ಯ ಇಲ್ಲಿ ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಗೀತ, ಸಂಕಲನ ಮತ್ತು ನಿರೂಪಣೆಯ ಕುರಿತಾಗಿ ತರಬೇತಿ ಆರಂಭಿಸಲಾಗುತ್ತಿದೆ.

ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸವೆನ್ ವಂರ‍್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ `ಸಿನಿಮಾ ಸ್ಕೂಲ್’ ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದೆ. ಮೂರು ಮತ್ತು ಆರು ತಿಂಗಳ ಕೋರ್ಸ್ಗಳು ಇಲ್ಲಿರುತ್ತವೆ. ಸಾಮಾನ್ಯವಾಗಿ ಸಿನಿಮಾ ಶಾಲೆಗಳು ನಿಗಧಿತ ಅವಧಿಯಲ್ಲಿ ಕಲಿಸಿ ಸರ್ಟಿಫಿಕೇಟ್ ಕೊಟ್ಟು ಕಳಿಸಲಾಗುತ್ತದೆ. ಆದರೆ `ಸಿನಿಮಾ ಸ್ಕೂಲ್’ನ ಧ್ಯೇಯವೇ ಬೇರೆ ಇದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳಿಸಿಕೊಟ್ಟುಬಿಟ್ಟರೆ ಮತ್ತೆ ಅವರು ಆಡಿಷನ್‌ಗಳಲ್ಲಿ ಭಾಗವಹಿಸುತ್ತಾ, ಅವಕಾಶಕ್ಕಾಗಿ ಅಲೆದಾಡುವಂತಾಗುತ್ತದೆ. ಹೊಸದಾಗಿ ಕಲಿತು ಹೋದವರಿಗೆ ಅಷ್ಟು ಸುಲಭಕ್ಕೆ ಅವಕಾಶಗಳು ದೊರೆಯುವುದೂ ಇಲ್ಲ. ಸಿನಿಮಾ ಸ್ಕೂಲ್‌ನಲ್ಲಿ ಕೋರ್ಸು ಮುಗಿಸಿದ ಎರಡು ಮೂರು ಬ್ಯಾಚ್‌ಗಳ ಅಭ್ಯರ್ಥಿಗಳಲ್ಲಿ ಯಾರು ಉತ್ತಮವಾಗಿ ಕಲಿತಿರುತ್ತಾರೋ ಅವರಿಗಾಗಿಯೇ ತರುಣ್ ಟ್ಯಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನು ಆರಂಭಿಸಿ, ಆಧ್ಯತೆ ಮೇರೆಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಕಮರ್ಷಿಯಲ್, ಕಲಾತ್ಮಕ ಮತ್ತು ಬ್ರಿಡ್ಜ್ ಚಿತ್ರಗಳನ್ನು ರೂಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತದೆ.

Advertisement

ಒಟ್ಟಾರೆ ಈ ಸಿನಿಮಾ ಸ್ಕೂಲ್ ಚಿತ್ರರಂಗದಲ್ಲಿ ಹೆಸರು ಮಾಡಲಿಚ್ಚಿಸುವವರ ಪಾಲಿಗೆ ಯೂನಿವರ್ಸಿಟಿಯಂತೆ ಆಗುವುದಂತೂ ಖಂಡಿತ. ನೀವೂ ಇಲ್ಲಿ ಸೇರಲು ಬಯಸಿದರೆ, ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ..

ಸಂಪರ್ಕ: #40, 2ನೇ ಮಹಡಿ, ನಮ್ಮೂರ ತಿಂಡಿ ಬಳಿ, ಎನ್.ಜಿ.ಇ.ಎಫ್. ಲೇಔಟ್ ಪಾರ್ಕ್ ಎದುರು, ನಾಗರಬಾವಿ, ಬೆಂಗಳೂರು-560072.

ಮೊಬೈಲ್ 92069 20689

Advertisement

Udayavani is now on Telegram. Click here to join our channel and stay updated with the latest news.

Next