Advertisement
ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಈ ಒಪ್ಪಂದ ನಡೆದಿದ್ದು, ದೇಶದ ಹಳ್ಳಿ ಹಳ್ಳಿಗಳಿಗೂ ಲಸಿಕೆಗಳು ಲಭ್ಯವಾಗಬೇಕು ಎನ್ನುವುದೇ ನಮ್ಮ ಪ್ರಧಾನ ಉದ್ದೇಶ ಎಂದು ಉಭಯ ಸಂಸ್ಥೆಗಳು ಹೇಳಿವೆ.
Related Articles
Advertisement
ಇನ್ನು, ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಸೀರಮ್ ಇನ್ಸ್ ಸ್ಟಿಟ್ಯೂಟ್ ನ ಕಾರ್ಯ ನಿರ್ವಾಹಕ ಅಧಿಕಾರಿ ಅದರ್ ಪೂನಾವಾಲ, ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಯೊಂದಿಗಿನ ಒಪ್ಪಂದದಿಂದ ದೇಶದಾದ್ಯಂತ ಕೋವಿಡ್ ಲಸಿಕೆಗಳ ಪೂರೈಕೆಯಲ್ಲಿ ಹೆಚ್ಚಿನ ಸಾಮರ್ಥ್ಯ ಲಭಿಸಿದಂತಾಗಿದೆ. ದೇಶದ ಎಲ್ಲಾ ಸಮುದಾಯಗಳಿಗೆ ಲಸಿಕೆಗಳು ತಲುಪುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಸಿಐಐ ಲಸಿಕೆಯ ಬೇಡಿಕೆಯ ಬಗ್ಗೆ ದೇಶದ 196 ನಗರ ಪ್ರದೇಶಗಳಲ್ಲಿ ಸಮೀಕ್ಷೆಯೊಂದನ್ನು ಮಾಡಿದ್ದು, ಆ ಸಮೀಕ್ಷೆಯನ್ವಯ ದೇಶದಾದ್ಯಂತ ಏಳು ದಶಲಕ್ಷಕ್ಕೂ ಅಧಿಕ ಲಸಿಕೆಗಳ ಅಗತ್ಯವಿದೆ ಎಂದು ತಿಳಿಸಿದೆ.
23 ಜುಲೈ 2021 ರ ವೇಳೆಗೆ, ಸಿಐಐ ಮತ್ತು ಸಿಐಐ ಫೌಂಡೇಶನ್ ನಿಂದ ದೇಶಾದ್ಯಂತ ನಡೆದ 430 ಶಿಬಿರಗಳ ಮೂಲಕ ಒಟ್ಟು 3.4 ಮಿಲಿಯನ್ ಸಿಂಗಲ್ ಡೋಸ್ ಗಳನ್ನು ನೀಡಲಾಗಿದೆ ಎಂದು ಸಿಐಐ ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”