Advertisement

ಪಿಎಸ್ ಐ ಅಕ್ರಮ ನೇಮಕಾತಿ;ಸಿಐಡಿ ಎಂತೆಂಥಹವರನ್ನೊ ಬಂಧಿಸಿದೆ : ಪ್ರಹ್ಲಾದ ಜೋಶಿ

06:33 PM May 08, 2022 | Team Udayavani |

ಹುಬ್ಬಳ್ಳಿ: ಪಿಎಸ್ ಐ ಅಕ್ರಮ ನೇಮಕಾತಿಯಲ್ಲಿ ಕಿಂಗ್ ಪಿನ್ ಹೆಸರು ಬಹಿರಂಗ ಪಡಿಸಿದರೆ ಸರಕಾರ ಉರುಳುತ್ತೆ ಎನ್ನುವ ಹೆಚ್.ಡಿ. ಕುಮಾರಸ್ವಾಮಿ ಅವರದು ಸರಕಾರ ಉರುಳಿಸುವುದು, ಬಿಡುವುದು ಅವರ ಜವಬ್ದಾರಿ ಅಲ್ಲ. ಯಾರೇ‌ ಆಗಲಿ ಅವರ ಹತ್ತಿರ ಮಾಹಿತಿ ಇದ್ದರೆ ಅದನ್ನು ಕೊಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಹುಬ್ಬಳ್ಳಿ ತಾಲೂಕಿನ ಶೆರೇವಾಡ ಗ್ರಾಮದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿಯ ಅಕ್ರಮದಲ್ಲಿ ಸಿಐಡಿ ಎಂತೆಂಥಹವರನ್ನೊ ಬಂಧಿಸಿದೆ. ವಿಶೇಷವಾಗಿ ಕಾಂಗ್ರೆಸ್ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಅವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೇ ಬಂಧನ ಆಗಿದ್ದಾನೆ. ಆತ ಶಾಸಕ ಪ್ರಿಯಾಂಕ ಖರ್ಗೆ ಮನೆಯಲ್ಲೆ ಇರುತ್ತಿದ್ದ. ಈ ಪ್ರಕರಣದಲ್ಲಿ ಆತ ಸಿಗದಿದ್ದರೆ ಚುನಾವಣೆಗೆ ನಿಲ್ಲುತ್ತಿದ್ದ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಪ್ರಸಿದ್ಧಿ ಪಡೆಯಲು ಕೆಲವರು ಏನೇಯಾದರೂ ಆರ್ ಎಸ್ ಎಸ್ ಎಂದು ಹೇಳುವುದು ಚಾಳಿ ಆಗಿದೆ ಎಂದರು.

ಅಜಾನ್ ವಿರುದ್ದ ಅಭಿಯಾನಕ್ಕೆ ಕರೆ ವಿಷಯವಾಗಿ ಕೆಲ ಹಿಂದೂ ಸಂಘಟನೆಗಳು ಸರಕಾರಕ್ಕೆ ಗುಡುವು ಕೊಟ್ಟಿದ್ದು ಗೊತ್ತಿಲ್ಲ. ಈ ಕುರಿತು ನಿಯಮ, ಕಾನೂನು ಪ್ರಕಾರ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಯಾರು ಕಾನೂನು ಕೆಗೈತ್ತಿಕೊಳಬಾರದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next