Advertisement

ನಂದ ಮುಲಾನಿಗೆ ಸಿಐಎ ಪ್ರತಿಷ್ಠಿತ ಹುದ್ದೆ

12:08 AM May 02, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಕೇಂದ್ರೀಯ ಗುಪ್ತಚರ ಇಲಾಖೆಯ (ಸಿಐಎ) ತಾಂತ್ರಿಕ ವಿಭಾಗದ ಮೊದಲ ಮುಖ್ಯಸ್ಥರಾಗಿ ಭಾರತೀಯ ಸಂಜಾತರಾದ ನಂದ ಮುಲ್‌ಚಂದಾನಿ ನೇಮಕಗೊಂಡಿದ್ದಾರೆ.

Advertisement

ಸಿಐಎ ನಿರ್ದೇ ಶಕ ವಿಲಿಯಮ್‌ ಜೆ. ಬರ್ನ್Õ ಚಂದಾ ನಿಯವರ ನೇಮಕಾತಿಯನ್ನು ಅಧಿಕೃತ ವಾಗಿ ಪ್ರಕಟಿಸಿದ್ದಾರೆ.

ಮತ್ತೊಂದೆಡೆ, ಚಂದಾನಿಯವರು ಸಿಲಿಕಾನ್‌ ವ್ಯಾಲಿಯಲ್ಲಿ 25 ವರ್ಷಗಳ ಕಾಲ ದುಡಿದ ಅನುಭವ ಹೊಂದಿದ್ದಾರೆ. 1979ರಿಂದ 1987ರ ನಡುವಿನ ಅವಧಿಯಲ್ಲಿ ದಿಲ್ಲಿಯ ಬ್ಲೂಬೆಲ್ಸ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಚಂದಾನಿ, ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್‌ ಸೈನ್ಸ್‌ ಹಾಗೂ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಅನಂತರ, ಸ್ಟಾನ್‌ಫೋರ್ಡ್‌ ವಿವಿಯಿಂದ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಎಂ.ಎಸ್ಸಿ ಹಾಗೂ ಹಾರ್ವರ್ಡ್‌ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ತಮ್ಮ ನೇಮಕಾತಿಯ ಬಗ್ಗೆ ಸಂಸತ ವ್ಯಕ್ತಪಡಿಸಿರುವ ಚಂದಾನಿ, “ಸಿಐಎಯಂಥ ದೈತ್ಯ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ತನಗೆ ಸಂದ ಗೌರವ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next