ಗದಗ: ಗ್ರಾಮದ ಏಕೈಕ ಜ್ಞಾನ ದೇಗುಲವೆಂಬ ಹಿರಿಮೆ ಹೊಂದಿರುವ ಜಿಲ್ಲೆಯ ಚುರ್ಚಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಗ್ರಾಮದಲ್ಲಿ ಸರಕಾರಿ ಶಾಲೆ ಸ್ಥಾಪನೆಗಾಗಿ ದಶಕಗಳ ಹಿಂದೆ ಭೂ ದಾನ ನೀಡಿದ್ದ ದಾನಿಗಳು ಈಗ ಭೂಮಿಗೆ ಪರಿಹಾರಒತ್ತಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ಶಾಲೆಯಲ್ಲಿ ಹೊಸ ಕೋಣೆಗಳ ನಿರ್ಮಾಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯ ಹಮ್ಮಿಕೊಂಡಿರುವುದು ಶಾಲೆ ವಿವಾದ ಸೇರಿದಂತೆ ಮತ್ತಿತರೆ ಸಮಸ್ಯೆ ಬಗೆಹರಿಯುವ ಕನಸು ಚಿಗುರೊಡೆದಿದೆ.ಮುಂಡರಗಿ ತಾಲೂಕಿನ ಕಂದಾಪುರ ಗ್ರಾಪಂ ವ್ಯಾಪ್ತಿಯ ಚುರ್ಚಿಹಾಳ ಗ್ರಾಮದಲ್ಲಿ 1955ರಲ್ಲಿ ಊರಿನ ಪ್ರಮುಖ ಆಸಕ್ತಿಯಿಂದಾಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. ಶಾಲೆಯಲ್ಲಿ ಮಕ್ಕಳ ಹಾಜರಾತಿಹಾಗೂ ಕಲಿಕಾ ಮಟ್ಟವೂ ಉತ್ತಮವಾಗಿತ್ತು. ಹೀಗಾಗಿಅಂದಿನ ಸರಕಾರ ಪ್ರಾಥಮಿಕ ಶಾಲೆ ಮತ್ತು ಎರಡುಕೊಠಡಿಗಳನ್ನೂ ಮಂಜೂರು ಮಾಡಿತ್ತು. 22-7-1973ರಲ್ಲಿಮೈಸೂರು ರಾಜ್ಯ ಸರಕಾರದ ಸಮಾಜ ಕಲ್ಯಾಣ ಮತ್ತುಅಭಿವೃದ್ಧಿ ಸಚಿವರಾಗಿದ್ದ ಎಂ.ಮಲ್ಲಿಕಾರ್ಜುನ ಅವರುಶಂಕುಸ್ಥಾಪನೆ ನೆರವೇರಿಸಿದ್ದರು. ಗ್ರಾಮದ ಮಕ್ಕಳಿಗೆ ಜ್ಞಾನದ ಜ್ಯೋತಿ ಬೆಳಗಿರುವ ಶಾಲೆಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಗ್ರಾಮದ ಏಕೈಕ ಶಾಲೆ :
ಮುಂಡರಗಿ ತಾಲೂಕಿನ ಚುರ್ಚಿಹಾಳ ಅತ್ಯಂತ ಪುಟ್ಟ ಗ್ರಾಮ. 2010ರ ಜನಗಣತಿ ಪ್ರಕಾರ 870 ಜನಸಂಖ್ಯೆ ಇದ್ದು, ಗ್ರಾಮದ ಏಕೈಕ ಶಾಲೆ ಇದಾಗಿದೆ. 1ರಿಂದ 8ನೇ ತರಗತಿ ವರೆಗಿನ ಈಶಾಲೆ, ಸುಸಜ್ಜಿತ ಕಟ್ಟಡ ಹಾಗೂ ಗುಣಮಟ್ಟದಕಲಿಕೆಗೆ ಖ್ಯಾತಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳುಕದಾಂಪುರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ.ಅಲ್ಲದೇ, ಸರಕಾರಿ ಶಾಲೆ ಮೇಲಿನ ಗ್ರಾಮಸ್ಥರ ಒಲವಿನಿಂದಾಗಿ ಖಾಸಗಿ ಶಾಲೆಗಳು ನೆಲೆಯೂರಲುಸಾಧ್ಯವಾಗಿಲ್ಲ ಎಂಬುದು ವಿಶೇಷ.
ಶಾಲೆಯ ವಿವಾದವೇನು? :
ಆರು ದಶಕಗಳ ಹಿಂದೆ ಗ್ರಾಮಕ್ಕೆ ಸರಕಾರ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಆಗ ಗ್ರಾಮದ ಪ್ರಮುಖರಾಗಿದ್ದ ಅಂದಾನಪ್ಪ ವೀರಪ್ಪ ಕವಲೂರ ಎಂಬುವರರು ಶಾಲೆಗೆ 20 ಗುಂಟೆ ಜಮೀನು ದಾನವಾಗಿ ನೀಡಿದ್ದರು. ಅಂದಿನಿಂದ ಈವರೆಗೆ ಅದೇ ಜಾಗೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದೆ. ದಾನಿ ಅಂದಾನಪ್ಪ ಅವರ ದತ್ತ ಪುತ್ರನೂ ಶಾಲೆಯಲ್ಲಿ ಅಭಿವೃದ್ಧಿಗಾಗಿ
ಗ್ರಾಮಸ್ಥರೊಂದಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಆದರೆ, ಅಂದಾನಪ್ಪ ಅವರು ಭೂಮಿ ದಾನ ನೀಡಿರುವ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆದಿಲ್ಲ. ಕೇವಲ ಮೌಖೀಕ ಒಪ್ಪಿಗೆ ಮೇರೆಗೆಸರಕಾರದಿಂದ ವಿವಿಧ ಹಂತದಲ್ಲಿ ಒಟ್ಟು 10 ಕೊಠಡಿಗಳು ತಲೆ ಎತ್ತಿವೆ. ಆದರೆ, ಶಾಲೆಗೆ ಜಮೀನು ಕಾನೂನಾತ್ಮಕವಾಗಿ ಹಸ್ತಾಂತರವಾಗಿಲ್ಲ ಎಂಬುದನ್ನು ಅರಿತಿರುವ ದಾನಿಗಳ ವಾರಸುದಾರರು ಭೂಮಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪರಿಹಾರನೀಡುವವರಿಗೆ ಹೊಸದಾಗಿ ಮಂಜೂರಾಗಿರುವ ಮೂರು ಕೊಠಡಿಗಳ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲವೆಂದು ಅಂದಾನಪ್ಪ ಅವರ ಪುತ್ರ ಶರಣಪ್ಪ ಎ.ಕವಲೂರ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಶಾಲೆಯ ಜಮೀನು ವಿವಾದದ ರೂಪ ಪಡೆದಿದೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ಎನ್.ಎ.ನದಾಫ್
ಚರಂಡಿ-ವಸತಿ ಮನೆಗಳ ಬೇಡಿಕೆ :
ಗ್ರಾಮದ ದ್ಯಾವಮ್ಮ ದೇವಸ್ಥಾನ ರಸ್ತೆಯಲ್ಲಿ ಸುಸಜ್ಜಿತ ರಸ್ತೆ, ಚರಂಡಿಗಳಿಲ್ಲ. ಹೀಗಾಗಿ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದು, ದೊಡ್ಡ ಗಟಾರು ಮತ್ತು ರಸ್ತೆ ನಿರ್ಮಿಸಬೇಕು. ಚರಂಡಿಗಳನ್ನು ನಿಯಮಿತವಾಗಿ ಸ್ವತ್ಛತೆಗೊಳಿಸಬೇಕು.ಗ್ರಾಮದ ಕೆಲ ಫಲಾನುಭವಿಗಳ ಮಾಸಾಶನ ಸ್ಥಗತಿಗೊಂಡಿದ್ದು, ಮಾಸಾಶನ ಪುನಾರಂಭಿಸಬೇಕು. ವಸತಿ ರಹಿತರಿಗೆ ನಿವೇಶನ ಒದಗಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾಗಿವೆ.
ಡಿಸಿ ಗ್ರಾಮವಾಸ್ತವ್ಯ ಹೆಚ್ಚಿಸಿದ ನಿರೀಕ್ಷೆ : ಶಾಲೆಯ ಹೊಸ ಕೋಣೆಗಳು
ಮುಕ್ತಾಯ ಹಂತಕ್ಕೆ ತಲುಪಿವೆ. ಈ ನಡುವೆ ದಾನಿಗಳ ವಾರಸುದಾರರು ತಡೆಯಾಜ್ಞೆತಂದಿದ್ದರಿಂದ ಅಭಿವೃದ್ಧಿ ಕಾರ್ಯಕ್ಕೆ ಗ್ರಹಣ ಹಿಡಿದಿದೆ. ಇದರ ಬೆನ್ನಲ್ಲೇಫೆ.20ರಂದು ಗ್ರಾಮದಲ್ಲಿ ಜಿಲ್ಲಾ ಧಿಕಾರಿಎಂ. ಸುಂದರೇಶ್ ಬಾಬು ವಾಸ್ತವ್ಯಹೂಡುತ್ತಿರುವುದು ಗ್ರಾಮಸ್ಥರಲ್ಲಿ ಭರವಸೆ ಹೆಚ್ಚಿಸಿದೆ.
-ವೀರೇಂದ್ರ ನಾಗಲದಿನ್ನಿ