Advertisement

ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಗುತ್ತಿಗೆಗೆ ಅನುಮೋದನೆ

04:23 PM May 23, 2022 | Team Udayavani |

ಕೆ.ಆರ್‌.ನಗರ: ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ಅನುಮೋದನೆ ನೀಡಿದೆ.

Advertisement

ಕಳೆದ 10 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದ್ದ ಕಾರ್ಖಾನೆಯನ್ನುಪುನರಾರಂಭ ಮಾಡಲು ಶಾಸಕ ಸಾ.ರಾ. ಮಹೇಶ್‌ ನಿರಂತರವಾಗಿ ನಡೆಸಿದ ಪ್ರಯತ್ನದ ಫ‌ಲವಾಗಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಪ್ರಸಕ್ತ ಹಂಗಾಮಿನಿಂದ 40 ವರ್ಷ ಅವಧಿಗೆ ಮುಧೋಳದ ನಿರಾಣಿ ಶುಗರ್ನವರಿಗೆ 120 ಕೋಟಿ ರೂ.ಗೆ ಗುತ್ತಿಗೆ ನೀಡಲು ಷರತ್ತುಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ.

50 ಲಕ್ಷ ರೂ. ಭದ್ರತೆ: ಗುತ್ತಿಗೆ ಒಪ್ಪಂದ ಏರ್ಪಟ್ಟ ಮೂರು ತಿಂಗಳೊಳಗೆ ಗುತ್ತಿಗೆ ಕರಾರನ್ನು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡು ಇದರೊಂದಿಗೆ 50 ಲಕ್ಷ ರೂ. ಭದ್ರತಾ ಠೇವಣಿ ಇಡಲುಸೂಚಿಸಲಾಗಿದೆ. ಮುಂಗಡವಾಗಿ 2.50 ಕೋಟಿ ರೂ. ಹಣ ಪಾವತಿಸುವಂತೆ ತಿಳಿಸಲಾಗಿದೆ.

ಸಾಲ ತೀರುವಳಿಗೆ ಷರತ್ತು: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸ ಬಹುದಾದ ರಾಜ್ಯ ಸಲಹಾ ಬೆಲೆಯಂತೆ,ರೈತರಿಗೆ ಕಬ್ಬಿನ ಹಣ ಸಕಾಲದಲ್ಲಿ ಪಾವತಿಸುವಂತೆ ಷರತ್ತು ವಿಧಿಸಲಾಗಿದೆ. ಇದರ ಜೊತೆಗೆಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಡಿಸಿಸಿ ಬ್ಯಾಂಕಿನಿಂದ ಪಡೆದಿರುವಸಾಲವನ್ನು ಒಂದೇ ಕಂತಿನಲ್ಲಿ ತೀರಿಸಿ, ಆನಂತರರಾಜ್ಯ ಸರ್ಕಾರದ ಹಣಕಾಸು ಸಂಸ್ಥೆಯಿಂದಪಡೆದಿರುವ ಸಾಲವನ್ನು ಆದ್ಯತೆ ಅನುಸಾರ ತೀರುವಳಿ ಮಾಡಲು ಷರತ್ತಿನಲ್ಲಿ ಸ್ಪಷ್ಟಪಡಿಸಲಾಗಿದೆ.

Advertisement

ಸರ್ಕಾರದ ಈ ಆದೇಶದೊಂದಿಗೆ ಕಳೆದ 10 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಂಡಿದ್ದ ಕಾರ್ಖಾನೆಯು ಆರಂಭವಾಗಲು ಹಸಿರು ನಿಶಾನೆ ತೋರಿಸಲಾಗಿದ್ದು, ಶಾಸಕರ ನಿರಂತರ ಹೋರಾಟಕ್ಕೆ ಫ‌ಲ ದೊರೆಯುವುದರೊಂದಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಸಕ್ಕರೆ ಕಾರ್ಖಾನೆ ಆರಂಭವಾಗುವುದರಿಂದ ಈ ಭಾಗದ ಜನತೆಗೆ ಉದ್ಯೋಗ ಮತ್ತು ಭದ್ರತೆ ದೊರೆಯಲಿದೆ. ರೈತಪರ ಕೆಲಸ ಮಾಡಿರುವ ಶಾಸಕರು ಇತರರಿಗೆ ಮಾದರಿ. – ವಡ್ಡರಕೊಪ್ಪಲು ಶ್ರೀಧರ್‌, ಜೆಡಿಎಸ್‌ ಮುಖಂಡ

ಕಳೆದ 10 ವರ್ಷಗಳಿಂದ ಸ್ಥಗಿತಗೊಳಿಸಿದ್ದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರಅಧಿಕೃತ ಆದೇಶ ಹೊರಡಿಸಿದೆ. ಈಪ್ರಕ್ರಿಯೆಗೆ ಚಾಲನೆ ನೀಡಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಸಹಕಾರನೀಡಿದ ಎಲ್ಲರಿಗೂ ಧನ್ಯವಾದಗಳು. ಕಾರ್ಖಾನೆ ಆರಂಭಆಗುವುದರಿಂದ ಈ ವ್ಯಾಪ್ತಿಯ ಸಾವಿರಾರು ರೈತರಿಗೆಅನುಕೂಲ ಆಗುವುದರ ಜೊತೆಗೆ ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಸಹಕಾರ ನೀಡಿದ ಸಿಎಂ ಬಸವರಾಜಬೊಮ್ಮಾಯಿ, ಇತರರಿಗೆ ಕ್ಷೇತ್ರದ ಜನತೆ ಪರ ಕೃತಜ್ಞತೆ ಸಲ್ಲಿಸುತ್ತೇನೆ. -ಸಾ.ರಾ.ಮಹೇಶ್‌, ಶಾಸಕ, ಕೆ.ಆರ್‌.ನಗರ

ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವಕಾರ್ಯ ಆರಂಭಿಸಲು ಪ್ರಮುಖ ಕಾರಣರಾದ ಶಾಸಕ ಸಾ.ರಾ.ಮಹೇಶ್‌ ಅವರಿಗೆ ರೈತರ ಪರ ಅಭಿನಂದಿಸುತ್ತೇನೆ. – ಮೂ.ರಾ.ಹರ್ಷಕುಮಾರಗೌಡ,ಜಿಲ್ಲಾ ಜೆಡಿಎಸ್‌ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next