Advertisement

ಚುಂಚನಗಿರಿ ಏತ ನೀರಾವರಿ ಯೋಜನೆಗೆ ಚಾಲನೆ

04:28 PM Nov 27, 2020 | Suhan S |

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ತಪ್ಪಲಲ್ಲಿರುವ ಹಲವುಕೆರೆಗಳಿಗೆ ಚುಂಚನಗಿರಿ ಶಾಖಾ ಕಾಲುವೆ ಮೂಲಕ ಹೇಮಾವತಿ ನೀರುಣಿಸುವ ಏತ ನೀರಾವರಿ ಯೋಜನೆಗೆ ಆದಿ ಚುಂಚನಗಿರಿಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

Advertisement

ಉಸ್ತುವಾರಿ ಸಚಿವಕೆ.ಸಿ.ನಾರಾಯಣಗೌಡ, ಶಾಸಕ ಸುರೇಶ್‌ಗೌಡ ಸಾಥ್‌ ನೀಡಿದರು. ಬುಧವಾರ ರಾತ್ರಿಯೇ ಮಠಕ್ಕೆ ಆಗಮಿಸಿದ್ದ ಸಚಿವರು ಬಿ.ಜಿ.ನಗರದ ವಿಜ್ಞಾತಂ ಭವನದಲ್ಲಿವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಕಾಲಭೈರವನಿಗೆ ಪೂಜೆ ಸಲ್ಲಿಸಿದ ಸಚಿವರು ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

ತದನಂತರ ಭಕ್ತಾದಿಗಳ ಅನುಕೂಲಕ್ಕಾಗಿ ಬೆಟ್ಟದ ಸುತ್ತಲೂ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಬೀದರ್‌- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹರಿಯುವ ಹೇಮಾವತಿಯ ಚುಂಚನಗಿರಿ ಶಾಖಾ ಕಾಲುವೆ ಬಳಿ ನಿರ್ಮಿಸಲಾಗಿರುವ ಏತ ನೀರಾವರಿ ಯಂತ್ರಾಗಾರದ ಕೊಠಡಿಯಲ್ಲಿ ನೀರೆತ್ತುವಯಂತ್ರದ ಸ್ವೀಚ್‌ ಒತ್ತುವ ಮೂಲಕ 2.65ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಯಿತು.ಬೆಟ್ಟದ ತಪ್ಪಲಲ್ಲಿರುವ ತಪೋವನ ಸೇರಿದಂತೆಹಲವು ಕೆರೆ- ಕಟ್ಟೆಗಳಿಗೆ ನೀರುಣಿಸುವ ಯೋಜನೆಇದಾಗಿದ್ದು. ಇದರಿಂದ ಕ್ಷೇತ್ರಕ್ಕೆ ಪ್ರಯೋಜನವಾಗಲಿದೆ. ಶ್ರೀಕ್ಷೇತ್ರದ ಮತ್ತೂಂದು ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಪ್ರಗತಿಯಲ್ಲಿರುವಅಯ್ಯನಕೆರೆ ಕಾಮಗಾರಿ ಯನ್ನು ಸಚಿವರು ಮತ್ತು ಶಾಸಕರೊಂದಿಗೆ ಸ್ವಾಮೀಜಿ ವೀಕ್ಷಿಸಿದರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕಾವೇರಿ ನೀರಾವರಿ ನಿಗಮದ ತುರುವೇಕೆರೆ ವಲಯದಅಧೀಕ್ಷಕಎಂಜಿನಿಯರ್‌ವರದಯ್ಯ,ಎಡೆಯೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜೇಶ್‌ ಗೌಡ, ಬೆಳ್ಳೂರು ಉಪ ವಿಭಾಗದ ಎಇಇ ರುದ್ದೇಶ್‌, ಗುತ್ತಿಗೆದಾರ ಗೌರೀಶ್‌, ಜೆಡಿಎಸ್‌ ಎಸ್ಸಿ,ಎಸ್ಟಿ ಯುವ ಘಟಕದ ತಾಲೂಕು ಅಧ್ಯಕ್ಷ ಲೋಹಿತ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next