Advertisement

ಐಆರ್‌ಬಿಯಲ್ಲಿ ಚುಕುಬುಕು ರೈಲಿನ ಶಾಲೆ 

03:57 PM Nov 30, 2018 | |

ಕೊಪ್ಪಳ: ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸರ್ಕಾರಗಳು ಹಲವು ಪ್ರಯತ್ನ ನಡೆಸುತ್ತಿವೆ. ಅದರ ಮಧ್ಯೆಯೂ ಇಲ್ಲೊಂದು ಪೂರ್ವ ಪ್ರಾಥಮಿಕ ಶಾಲೆ ಗೋಡೆಗಳ ಮೇಲೆ ರೈಲು ಮಾದರಿ ಬಣ್ಣ ಬಳಸಿ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ರೈಲಿನ ಚಿತ್ರಣ ನೋಡುತ್ತಿರುವ ಮಕ್ಕಳು ಶಾಲೆಗೆ ಓಡೋಡಿ ಬರುತ್ತಿದ್ದಾರೆ.

Advertisement

ತಾಲೂಕಿನ ಮುನಿರಾಬಾದ್‌ ಸಮೀಪದ ಐಆರ್‌ಬಿನಲ್ಲಿ ಪ್ರಸಕ್ತ ವರ್ಷದಿಂದ ಆರಂಭವಾಗಿರುವ ಶಾಲೆ ಎಲ್ಲರ ಗಮನ ಸೆಳೆದಿದೆ. ಪ್ರೀ ಸ್ಕೂಲ್‌ ಲರ್ನ್ ಗೋ ಎನ್ನುವ ಹೆಸರಿನ ನರ್ಸರಿ ಶಾಲೆ ಮಕ್ಕಳಿಗೆ ಅಚ್ಚು ಮೆಚ್ಚಾಗಿದೆ.

ಐಆರ್‌ಬಿಯಲ್ಲಿ ನೂರಾರು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೊದಲು ಇಲ್ಲಿನ ಮಕ್ಕಳನ್ನು ಶಾಲೆಗೆ ಕಳುಹಿಸುವುದು ತುಂಬ ತೊಂದರೆಯಿತ್ತು. ಮುನಿರಾಬಾದ್‌, ಹೊಸಪೇಟೆಗೆ ಕಳುಹಿಸುವಂತ ಸ್ಥಿತಿಯಿತ್ತು. ಆದರೆ ವಾಹನ ಸಂಚಾರ, ದಟ್ಟಣೆ ಸೇರಿದಂತೆ ಪಾಲಕರು ಮಕ್ಕಳನ್ನು ಮನೆಯಿಂದ ಕಳುಹಿಸಲು ಹಿಂದೇಟಾಕುವಂತ ಸ್ಥಿತಿಯಿತ್ತು. ಆದರೆ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಾಲೆ ಚಿತ್ತ ಹರಿಸಿದರೆ ಶಿಕ್ಷಣದ ಗುಣಮಟ್ಟವಾಗಲಿದೆ ಎನ್ನುವುದನ್ನು ಅರಿತ ಈ ಹಿಂದಿನ ಕಮಾಂಡಂಡ್‌ ನಿಶಾ ಜೈನ್‌ ಇಲ್ಲಿನ ನೌಕರ ವರ್ಗದ ಮಕ್ಕಳಿಗೆ ಸ್ಥಳೀಯವಾಗಿಯೇ ನರ್ಸರಿ ಶಾಲೆ ಆರಂಭಿಸಬೇಕು ಎಂದು ಯೋಜನೆ ರೂಪಿಸಿದ್ದರು. ಅದರಂತೆ ತರಬೇತಿ ಕೇಂದ್ರದಲ್ಲಿ ಇರುವ 2-3 ಕೊಠಡಿ ಸಿದ್ದಪಡಿಸಿ ಪ್ರೀ ಸ್ಕೂಲ್‌ ಲರ್ನ್ ಗೋ ಎನ್ನುವ ಹೆಸರಿನ ಶಾಲೆ ಆರಂಭಿಸಿದ್ದರು.

ಶಾಲೆ ಕೊಠಡಿ ರೈಲಿನ ಬೋಗಿಯಾಗಿವೆ: ಮಕ್ಕಳನ್ನು ಶಾಲೆಯತ್ತ ಸೆಳೆಯುವ ಉದ್ದೇಶದಿಂದ ಶಾಲೆಗೆ ರೈಲು ಗಾಡಿ, ಬೋಗಿ ಚಿತ್ರಣದ ಬರೆಯಿಸಿ ನವ ವಿನ್ಯಾಸಗೊಳಿಸಿದ್ದರು. ಮಕ್ಕಳಿಗೆ ರೈಲು ಎಂದರೆ ಪಂಚಪ್ರಾಣ. ಆಟವಾಡಲೂ ಸಹಿತ ರೈಲನ್ನೇ ಹೆಚ್ಚಾಗಿ ಆಯ್ಕೆ ಮಾಡಿ ಖುಷಿಪಡುತ್ತವೆ. ಇನ್ನು ಶಾಲೆ ಚಿತ್ರಣ ರೈಲಾಗಿದ್ದರೆ ಮತ್ತಷ್ಟು ಖುಷಿ. ಶಾಲೆ ಕೊಠಡಿಗಳ ಕಿಡಕಿಗಳು ರೈಲಿನ ಕಿಡಕಿಗಂತೆ ಭಾಸವಾಗುವಂತೆ ಚಿತ್ರಣ ಮಾಡಿ ಗಮನ ಸೆಳಯುವಂತೆ ಮಾಡಿದ್ದರು. ಮಕ್ಕಳು ಕೊಠಡಿ ಒಳಗೆ ಪ್ರವೇಶಿಸಿದ ತಕ್ಷಣವೇ ನಾವು ರೈಲಿನಲ್ಲಿ ಹತ್ತಿದ್ದೇವೆ ಎನ್ನುವ ಭಾವನೆ ಭಾಸವಾಗುತ್ತಿದೆ.

60 ವಿದ್ಯಾರ್ಥಿಗಳಿಗೆ ಆರಂಭಿಕ ಶಿಕ್ಷಣ: ಸ್ಥಳೀಯವಾಗಿಯೇ ಶಾಲೆಯನ್ನು ನವ ವಿನ್ಯಾಸದಲ್ಲಿ ಆರಂಭಿಸಿದ್ದರಿಂದ ತರಬೇತಿ ಕೇಂದ್ರದಲ್ಲಿನ ನೌಕರರು ಖುಷಿಯಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸು ಮಾಡಿದ್ದಾರೆ. ಶಾಲೆ ಪ್ರಸಕ್ತ ವರ್ಷ ಆರಂಭಿಸಿದ್ದರಿಂದ 60 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.ಆರಂಭದಲ್ಲಿ ಉಚಿತ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದು, ಮುಂದೆ ಶುಲ್ಕ ನಿಗ ಮಾಡುವ ಯೋಜನೆ ನಡೆದಿದೆ.

Advertisement

ಇಲ್ಲಿನ ಶಿಕ್ಷಕರಿಗೆ ಬೆಂಗಳೂರಿಗೆ ತರಬೇತಿ ಕೊಡಿಸಲಾಗಿದ್ದು, ಮಕ್ಕಳಿಗೆ ಬೋಧನೆ ನಡೆದಿದೆ.
ನಿಶಾ ಜೈನ್‌ ಅವರ ಶ್ರಮದ ಫಲವಾಗಿ ಈಗಷ್ಟೇ ಶಾಲೆ ಆರಂಭವಾಗಿ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಸ್ಥಳೀಯ ನೌಕರರು ತಮ್ಮ ಮಕ್ಕಳು ನಿರಾತಂಕವಾಗಿ ಶಾಲೆಗೆ ಹೋಗಲಿ ಬರಲಿದ್ದಾರೆ ಎನ್ನುವ ಉತ್ಸಾಹದಲ್ಲಿದ್ದಾರೆ. ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಮುಖ ಇರುವಂತಹ ಶಾಲೆಗಳಲ್ಲೂ ಇಂತ ಪ್ರಯೋಗ ನಡೆಸಿದರೆ ನಿಶ್ಚಿತವಾಗಿಯೂ ಮಕ್ಕಳ ದಾಖಲಾತಿ ಹೆಚ್ಚಳವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ ಶಾಲೆ ಆಡಳಿತ ಮಂಡಳಿತ ಹೊಸ ಪ್ರಯೋಗಕ್ಕೆ ಮುಂದಾಗುವ ಅವಶ್ಯಕತೆಯಿದೆ.

ಈ ಹಿಂದಿನ ಕಮಾಂಡಂಟ್‌ ನಿಶಾ ಜೈನ್‌ ಅವರ ಯೋಜನೆಯಿಂದ ಶಾಲೆ ಆರಂಭ ಮಾಡಿದ್ದೇವೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಿದ್ದೇವೆ. ಇಲ್ಲಿನ ಮಕ್ಕಳೇ ಹೆಚ್ಚು ದಾಖಲಾಗಿದ್ದಾರೆ. ಮೊದಲು ತರಬೇತಿ ಕೇಂದ್ರದ ಮಕ್ಕಳಿಗೆ ಆದ್ಯತೆ ನೀಡಿದ್ದು, ಹೊರಗಿನ ಮಕ್ಕಳಿಗೂ ಅವಕಾಶವಿದೆ.
. ಸತೀಶ, ಐಆರ್‌ಬಿ ಇನ್ಸಪೆಕ್ಟರ್‌,
ಮುನಿರಾಬಾದ್‌

ಶಾಲೆ ಗೋಡೆಗಳಿಗೆಲ್ಲ ರೈಲಿನ ಬೋಗಿ ಚಿತ್ರಣ ಬರೆಯಿಸಿದ್ದು, ಇದನ್ನು ನೋಡಿ ಮಕ್ಕಳು ಖುಷಿಯಿಂದಲೇ ಶಾಲೆಗೆ ಬರುತ್ತಿದ್ದಾರೆ. ಇಲ್ಲಿನ ಶಿಕ್ಷಕರಿಗೆ ಬೆಂಗಳೂರಿನಲ್ಲಿ ತರಬೇತಿ ದೊರೆತಿದೆ. ವ್ಯರ್ಥ ಸಾಮಗ್ರಿಗಳನ್ನೇ ಮಕ್ಕಳಿಗೆ ಆಟವಾಡಲು ಸಾಮಗ್ರಿಗಳನ್ನಾಗಿಸಿ ಬಳಕೆ ಮಾಡಿಕೊಳ್ಳಲಾಗಿದೆ.
. ಸಪ್ನಾ ಪಾಟೀಲ, ಶಿಕ್ಷಕಿ

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next