Advertisement
ಚರ್ಚ್‌ಗಳು ಗೂಡುದೀಪ, ವಿದ್ಯುದ್ದೀಪ ಗಳಿಂದ ಅಲಂಕಾರಗೊಂಡಿದ್ದು, ಮಂಗಳ ವಾರ ರಾತ್ರಿ ಪ್ರಾರ್ಥನೆ ಸಹಿತ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ತಾ|ನಲ್ಲಿ ಪ್ರಮುಖವಾಗಿ ಸಂತ ಲಾರೆನ್ಸ್ ಪ್ರಧಾನ ದೇವಾಲಯ, ಹೋಲಿ ರಿಡಿಮರ್ ಚರ್ಚ್, ಉಜಿರೆ ಸಂತ ಅಂಥೋನಿ ಚರ್ಚ್, ಸೈಂಟ್ ಜಾರ್ಜ್ ಉಜಿರೆ, ಮುಂಡಾಜೆ, ತೋಟತ್ತಾಡಿ, ಗಂಡಿಬಾಗಿಲು, ವೇಣೂರು, ಅಳದಂಗಡಿ ಸಹಿತ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯದಲ್ಲಿ ಆಕರ್ಷಕ ಗೋದಲಿ ನಿರ್ಮಿಸಲಾಗಿದೆ. ಹೆಚ್ಚಿನ ಮನೆಗಳಲ್ಲಿ ಕ್ರಿಸ್ಮಸ್ ವೃಕ್ಷವನ್ನು ಅಲಂಕರಿಸಲಾಗಿದೆ.
ಎಲ್ಲ ಚರ್ಚ್‌ಗಳಲ್ಲಿ ಡಿ. 25ರಂದು ಬೆಳಗ್ಗೆ 8.30ಕ್ಕೆ ದಿವ್ಯಬಲಿಪೂಜೆ ನಡೆದು ಕ್ರೈಸ್ತರು ಮೆರವಣಿಗೆ ನಡೆಸುವರು. ಬಂಟ್ವಾಳ: ಶಾಂತಿಯ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬವು ಎಲ್ಲಡೆ ಡಿ. 25 ರಂದು ಆಚರಿಸಲ್ಪಡುತ್ತಿದ್ದು, ಬಂಟ್ವಾಳ ದಲ್ಲೂ ಕ್ರೈಸ್ತರು ಹಬ್ಬವನ್ನು ಅತ್ಯಂತ ಸಂಭ್ರಮ ದಿಂದ ಆಚರಿಸುತ್ತಾರೆ.
Related Articles
Advertisement
ಖರೀದಿ ಭರಾಟೆಕ್ರಿಸ್ಮಸ್ ಹಬ್ಬಕ್ಕೆ ಮಾರುಕಟ್ಟೆಯೂ ವಿಶೇಷ ಮೆರುಗನ್ನು ಪಡೆದುಕೊಂಡಿದ್ದು, ಬಣ್ಣ ಬಣ್ಣದ ನಕ್ಷತ್ರಗಳು ಕಂಗೊಳಿಸುತ್ತಿವೆ. ಈಗಾಗಲೇ ಹಬ್ಬಕ್ಕೆ ಬೇಕಾದ ಖರೀದಿ ಭರಾಟೆಯೂ ಪೂರ್ಣಗೊಂಡಿದ್ದು, ಪ್ರತಿ ಮನೆಯ ಮುಂದೆಯೂ ವಿಶೇಷ ರೀತಿಯ ಗೋದಲಿಗಳು, ನಕ್ಷತ್ರಗಳು ಕಂಗೊಳಿಸುತ್ತಿವೆ. ಜತೆಗೆ ಕ್ರಿಸ್ಮಸ್ ಟ್ರಿಗಳೂ ಹಬ್ಬದ ಮೆರುಗನ್ನು ಹೆಚ್ಚಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ಚರ್ಚ್ ಗಳನ್ನೂ ವಿದ್ಯುತ್ ದೀಪಗಳಿಂದ ಅಲಂ ಕರಿಸಲಾಗಿದ್ದು, ಅಲ್ಲಿಯೂ ಬೃಹತ್ ಗೋದಲಿಗಳನ್ನು ನಿರ್ಮಿಸಲಾಗಿದೆ. ಬಾಲ್-ಬೆಲ್‌ಗಳ ಗೊಂಚಲು, ಸ್ಟಾರ್‌ಗಳು ಕಂಗೊಳಿಸುತ್ತಿವೆ. ವಿವಿಧ ರೀತಿಯ ವಿದ್ಯುತ್ ದೀಪ ಗಳಿಂದಲೂ ಅಲಂಕರಿಸಲಾಗಿದೆ. ಸಾಂತಾ ಕ್ಲಾಸ್ ಟೋಪಿ, ಮುಖವಾಡಗಳು ಮಾರುಕಟ್ಟೆಗಳಲ್ಲಿ ಕಂಗೊಳಿಸುತ್ತಿವೆ. ಆಲಂಕಾರಿಕ ವಸ್ತುಗಳ ಖರೀದಿ ಭರಾಟೆ
ಅಂಗಡಿ ಮುಂಗಟ್ಟುಗಳಲ್ಲಿ ಸಾಂತಾಕ್ಲಾಸ್ ಟೋಪಿ, ಗೂಡುದೀಪ ಸಹಿತ ವಿವಿಧ ರೀತಿಯ ಆಲಂಕಾರಿಕ ವಸ್ತುಗಳು ಮಾರಾಟಕ್ಕಿವೆ. ಹೂ-ಹಣ್ಣುಗಳ ಖರೀದಿಗೆ ಜೋರಾಗಿದೆ. ಹಬ್ಬದ ಭೋಜನ
ಡಿ. 25ರಂದು ಹಬ್ಬದ ಭೋಜನ ನಡೆಯಲಿದ್ದು, ಕ್ರೈಸ್ತ ಬಾಂಧವರು ತಮ್ಮ ಆತ್ಮೀಯರನ್ನು ಮನೆಗೆ ಆಹ್ವಾನಿಸಿ ಹಬ್ಬದ ಭೋಜನ ಏರ್ಪಡಿಸಲಿದ್ದಾರೆ. ಡಿ. 25ರ ಬಳಿಕ ಕೆಲವೊಂದೆಡೆ ಸುಮಾರು ಒಂದು ವಾರಗಳ ಕಾಲಗಳ ವರೆಗೂ ಹಬ್ಬದ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತವೆ.