Advertisement

ಕ್ರಿಸ್ಮಸ್‌: ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಹಬ್ಬ ಆಚರಣೆ

01:26 AM Dec 25, 2019 | mahesh |

ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಜನನದ ಹಬ್ಬದ ಮುನ್ನಾ ದಿನವಾದ ಮಂಗಳವಾರ ಕ್ರೈಸ್ತರು ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು.

Advertisement

ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್‌ ಕ್ಯಾರೊಲ್‌ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಕಂದ ಯೇಸುವಿಗೆ ನಮಿಸಿದರು.

ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಬಿಷಪ್‌ ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ, ಉಡುಪಿ ಕಲ್ಯಾಣಪುರ ಕೆಥೆಡ್ರಲ್‌ನಲ್ಲಿ ಬಿಷಪ್‌ ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ನೇತೃತ್ವ ವಹಿಸಿ ಹಬ್ಬದ ಸಂದೇಶ ನೀಡಿದರು. ಕೆಥೆಡ್ರಲ್‌ನ ರೆಕ್ಟರ್‌ ರೆ| ಜೆ.ಬಿ. ಕ್ರಾಸ್ತಾ, ರೆ| ಲಾರೆನ್ಸ್‌ ಡಿ’ಸೋಜಾ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.

ಬಲಿ ಪೂಜೆಯ ಬಳಿಕ ಕ್ರೈಸ್ತರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೇಕ್‌ ವಿತರಿಸಲಾಯಿತು. “ಸಾಂತಾಕ್ಲಾಸ್‌’ ಆಗಮನ ವಿಶೇಷ ಆಕರ್ಷಣೆಯಾಗಿತ್ತು. ಬುಧವಾರ ಕ್ರಿಸ್ಮಸ್‌ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್‌ ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯುವುದು. ಮನೆಗಳಲ್ಲಿ ಕ್ರಿಸ್ಮಸ್‌ ವಿಶೇಷ ತಿಂಡಿ ತಿನಿಸು “ಕುಸ್ವಾರ್‌’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ.

ದೇಹವೇ ದೇವರಿರುವ ದೇವಾಲಯ; ಅಲ್ಲಿ ದೇವರನ್ನು ಕಾಣಬೇಕು ಮನುಷ್ಯ ಜೀವವು ದೇವರು ಕೊಟ್ಟ ಅಮೂಲ್ಯ ಕೊಡುಗೆ. ಅದನ್ನು ರಕ್ಷಿಸೋಣ, ಬೆಳೆಸೋಣ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ನಿರ್ಧಾರ ಮಾಡೋಣ. ಮಾನವ ದೇಹವೇ ದೇವರಿರುವ ದೇಗುಲ. ಅಲ್ಲಿ ದೇವರನ್ನು ಕಾಣಬೇಕು ಎಂದು ಬಿಷಪ್‌ ಹೇಳಿದರು.

Advertisement

ಪಾಪದ ಕೂಪಕ್ಕೆ ಬಿದ್ದಿರುವ ಮನುಕುಲವನ್ನು ರಕ್ಷಿಸಲು, ಈ ಪ್ರಕೃತಿಯನ್ನು ಪುನ‌ಶ್ಚೇತನಗೊಳಿಸಲು ದೇವರು ಯೇಸು ಕ್ರಿಸ್ತರನ್ನು ಈ ಭೂಮಿಗೆ ಕಳುಹಿಸಿದರು. ದೇವರ ಪುತ್ರರಾಗಿ ಯೇಸು ಕಂದನಿಗೆ ನಮ್ಮ ಹೃನ್ಮನಗಳಲ್ಲಿ ನೆಲೆಸಲು ಅವಕಾಶ ಕೊಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next