ಕಲಬುರಗಿ: ನಿಗಮ ಸ್ಥಾಪನೆ ಸೇರಿದಂತೆ ಕ್ರೈಸ್ತ ಸಮುದಾಯದ ಬೇಡಿಕೆಗಳನ್ನು 2018ರ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಆಲ್ ಇಂಡಿಯಾ ಕ್ರಿಶ್ಚಿಯನ್ ಮೈನಾರಿಟಿ ಫ್ರಂಟ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ಕ್ರೈಸ್ತ ಸಮುದಾಯವನ್ನು ಹಿಂದುಳಿದ ವರ್ಗಗಳಲ್ಲಿ ಎಣಿಕೆಯಾಗುತ್ತಿದೆ. ಈವರೆಗೂ ಹಲವಾರು ಸಮುದಾಯಗಳಿಗೆ ಅವರದ್ದೆ ಆದ ನಿಗಮ ಮಂಡಳಿ ಇದೆ. ಆದರೆ, ಕ್ರೈಸ್ತ ಸಮುದಾಯಕ್ಕೂ ನಿಗಮ ಮಂಡಳಿ ಸ್ಥಾಪಿಸಿ ಸಮುದಾಯದವರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕು. ಮುಸ್ಲಿಂ ಸಮುದಾಯದವರಿಗೆ ಹಜ್ ಹಾಗೂ
ಇತರೆ ಯಾತ್ರೆಗಳಿಗೆ ಸರಕಾರದ ವತಿಯಿಂದ ಆರ್ಥಿಕ ಸಹಾಯ ಹಾಗೂ ಕೆಲವು ಸವಲತ್ತುಗಳಿವೆ.
ನಮ್ಮ ಸಮುದಾಯದವರಿಗೂ ಜರಿಸೇಲಂ(ಜೀಸಸ್ ಜನಿಸಿದ ಪ್ರಾಂತ)ದೇಶಕ್ಕೆ ಪ್ರಯಾಣ ಬೆಳೆಸಲು ಸರ್ಕಾರದ ವತಿಯಿಂದ ಆರ್ಥಿಕ ಸವಲತ್ತುಗಳನ್ನು ನೀಡಬೇಕು. ಪ್ರತಿಯೊಂದು ಜಿಲ್ಲೆಗೂ ಸರ್ಕಾರ ಜಮೀನುಗಳಲ್ಲಿ ರುದ್ರಭೂಮಿ ಎಂದು ಘೋಷಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದರು.
ಆಲ್ ಇಂಡಿಯಾ ಕ್ರಿಶ್ಚಿಯನ್ ಮೈನಾರಿಟಿ ಫ್ರಂಟ್ ಕರ್ನಾಟಕ ರಾಜ್ಯ ಸಂಚಾಲಕ ಸಂಧ್ಯಾರಾಜ ಸ್ಯಾಮುವೆಲ್
ಹಾಗೂ ಇತರರು ಇದ್ದರು.