Advertisement

ಗೇಲ್‌ ಮರ್ಮಾಂಗ ಪ್ರಕರಣ: ಪುಸ್ತಕದ ಆರಂಭಿಕ ಬೆಲೆಯೇ 2 ಕೋಟಿ ರೂ.

06:15 AM Nov 11, 2017 | |

ಸಿಡ್ನಿ: ವೆಸ್ಟ್‌ ಇಂಡೀಸ್‌ ಸ್ಫೋಟಕ ಕ್ರಿಕೆಟಿಗ ಕ್ರಿಸ್‌ಗೇಲ್‌ ಆಸ್ಟ್ರೇಲಿಯಾ ಸುದ್ದಿಸಂಸ್ಥೆ ಫೇರ್‌ಫಾಕ್ಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಗೆದ್ದಿದ್ದಾರೆ. 

Advertisement

ಈ ಪ್ರಕರಣದಲ್ಲಿ ಗೇಲ್‌ಗೆ ಪರಿಹಾರವೆಷ್ಟು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಅದಕ್ಕೂ ಮುನ್ನವೇ ಗೇಲ್‌ ಭರ್ಜರಿ ಹಣ ಮಾಡಿಕೊಂಡಿದ್ದಾರೆ. ಹೇಗೆ ಗೊತ್ತಾ? ಪ್ರಕರಣದ ವಿವರವನ್ನು ಪುಸ್ತಕವಾಗಿ ಪ್ರಕಟಿಸಲು ಹಲವರು ಮೇಲೆ ಬಿದ್ದಿದ್ದು, ಪುಸ್ತಕದ ಹಕ್ಕನ್ನು ನೀಡಲು ಆರಂಭದ ಬೆಲೆಯಾಗಿ 2 ಕೋಟಿ ರೂ.ಗಳನ್ನು ಗೇಲ್‌ ನಿಗದಿಪಡಿಸಿದ್ದಾರಂತೆ! 

ವೆಸ್ಟ್‌ ಇಂಡೀಸ್‌ ತಂಡದ ಅಂಗಮರ್ದಕಿಗೆ 2015ರ ಏಕದಿನ ವಿಶ್ವಕಪ್‌ ವೇಳೆ ಗೇಲ್‌ ತಮ್ಮ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಫೇರ್‌ಫಾಕ್ಸ್‌ ವರದಿ ಮಾಡಿತ್ತು. ತಾನು ಹಾಗೆ ಮಾಡಿಲ್ಲ, ನನ್ನ ವರ್ಚಸ್ಸನ್ನು ಹಾಳು ಮಾಡಲು ಫಾಕ್ಸ್‌ ಹಾಗೆ ಮಾಡಿದೆ ಎಂದು ಗೇಲ್‌ ಆಸೀಸ್‌ ನ್ಯಾಯಾಲಯದಲ್ಲಿ ವಾದಿಸಿ ಗೆದ್ದಿದ್ದರು. ಈ ಪ್ರಕರಣದ ಎಳೆಎಳೆಯನ್ನು ಬಿಚ್ಚಿಡಲು ಗೇಲ್‌ ಈಗ ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next