Advertisement

ಓವರೊಂದರಲ್ಲಿ 32 ರನ್‌ ಸಿಡಿಸಿದ ಕ್ರಿಸ್‌ ಗೇಲ್

01:36 AM Aug 04, 2019 | Sriram |

ಹೊಸದಿಲ್ಲಿ: ಕೆನಡದಲ್ಲಿ ಸಾಗುತ್ತಿರುವ ಗ್ಲೋಬಲ್ ಟಿ20 ಕೂಟದಲ್ಲಿ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ಸಿಕ್ಸರ್‌ಗಳ ಸುರಿಮಳೆ ಸುರಿಸಿ ಸುದ್ದಿಯಾಗಿದ್ದಾರೆ. ಅವರು ವಿಶ್ವದ ಎಲ್ಲೆ ಆಡಿದರೂ ಸಿಕ್ಸರ್‌ಗಳಿಗೆ ಬರವಿಲ್ಲ.

Advertisement

ಶಾದಾಬ್‌ ಖಾನ್‌ ಅವರ ಒಂದು ಓವರಿನಲ್ಲಿ 32 ರನ್‌ ಸಿಡಿಸಿದ ಅವರು ಒಟ್ಟಾರೆ 44 ಎಸೆತಗಳಿಂದ 94 ರನ್‌ ಗಳಿಸಿದರು. ಇದರಿಂದಾಗಿ ವಾಂಕೋವರ್‌ ನೈಟ್ಸ್‌ ತಂಡವು ಆರು ವಿಕೆಟ್‌ಗಳಿಂದ ಎಡ್ಮಂಟನ್‌ ರಾಯಲ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

6,6,4,4,6,6 ಶಾದಾಬ್‌ ಖಾನ್‌ ಎಸೆದ 13ನೇ ಓವರಿನಲ್ಲಿ ಗೇಲ್ ಅವರು ನಾಲ್ಕು ಸಿಕ್ಸರ್‌ ಮತ್ತು ಎರಡು ಬೌಂಡರಿ ಸಹಿತ 32 ರನ್‌ ಹೊಡೆದರು. ಒಟ್ಟಾರೆ 44 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 94 ರನ್‌ ಹೊಡೆದರು. ವಾರದ ಹಿಂದೆ ಇದೇ ಕೂಟದ ಪಂದ್ಯವೊಂದರಲ್ಲಿ ಅವರು 122 ರನ್‌ ಗಳಿಸಿದ್ದರು. ಮತ್ತೆ ಶತಕ ದಾಖಲಿಸಲು ಆರು ರನ್ನಿನಿಂದ ಅವರು ಅವಕಾಶ ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next