Advertisement
ದೇವಸ್ಥಾನ, ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಬಿರುಸಿನ ತಯಾರಿಯಲ್ಲಿ ತೊಡಗಿವೆ. ಪ್ಲಾಸ್ಟರ್‌ಆಫ್ ಪ್ಯಾರಿಸ್ ಗಣಪನ ಮೂರ್ತಿ ಆರಾಧನೆ ಮಾಡಬಾರದು ಎಂಬ ನಿಯಮ ಇರುವುದರಿಂದ ಎಲ್ಲೆಡೆ ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ದ.ಕ. ಜಿಲ್ಲೆಯಲ್ಲಿ ಗೌರಿ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೆ ಇದ್ದರೂ ಕೆಲವೆಡೆ ಗೌರಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದೆ. ಹೆಂಗಳೆಯರ ನೆಚ್ಚಿನ ಹಬ್ಬ ಗೌರಿಹಬ್ಬಕ್ಕಾಗಿ ಮನೆಗಳಲ್ಲಿ ತಯಾರಿ ಜೋರಾಗಿದೆ. ಇದಕ್ಕಾಗಿ ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಮುಂತಾದೆಡೆ ಹೂವು ಮಾರಾಟಗಾರರು ಉತ್ತರ ಕನ್ನಡ ಭಾಗಗಳಿಂದ ಆಗಮಿ ಸಿದ್ದು, ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.