Advertisement

ಚೌಕಿದಾರ: ಸುಷ್ಮಾ ಉತ್ತರ ವೈರಲ್‌

12:58 AM Mar 31, 2019 | Team Udayavani |

ಹೊಸದಿಲ್ಲಿ: ಸೂಕ್ಷ್ಮ ಸಂವೇದನೆಯುಳ್ಳ ನಾಯಕಿಯಾಗಿರುವ ನೀವು ನಿಮ್ಮ ಹೆಸರಿನ ಮುಂದೆ “ಚೌಕಿದಾರ’ ಎಂದು ಸೇರಿಸಿರುವುದೇಕೆ ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನೀಡಿರುವ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

“ಮೇಡಂ, ನೀವು ನಮ್ಮ ವಿದೇಶಾಂಗ ಸಚಿವೆ ಎಂದು ನಾವು ನಂಬಿದ್ದೇವೆ. ಬಿಜೆಪಿಯಲ್ಲಿ ಸಂವೇದನೆಯುಳ್ಳ ಏಕೈಕ ನಾಯಕಿ ನೀವು. ಏಕೆ ನಿಮ್ಮನ್ನು ನೀವು ಚೌಕಿದಾರ ಎಂದು ಕರೆಯುತ್ತೀರಿ’ ಎಂದು ಟ್ವಿಟರ್‌ನಲ್ಲಿ ಪ್ರಶ್ನೆಯೊಂದು ಕೇಳಿಬಂದಿತ್ತು. ಇದಕ್ಕೆ ಸುಷ್ಮಾ, “ನಾನು ಭಾರತೀಯ ಹಿತಾಸಕ್ತಿಗಳ ಮತ್ತು ವಿದೇಶದಲ್ಲಿರುವ ಭಾರತೀಯರನ್ನು ಕಾವಲು ಕಾಯುವವಳು’ ಎಂದು ಉತ್ತರಿಸಿದ್ದಾರೆ. ಅವರ ಈ ಉತ್ತರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಟ್ವೀಟ್‌ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next