Advertisement

ಸರಳವಾಗಿ ಚೌಡೇಶ್ವರಿ ದೇವಿ ವಿಜಯದಶಮಿ ಉತ್ಸವ

12:26 PM Oct 27, 2020 | Suhan S |

ಆನೇಕಲ್‌: ಅದ್ಧೂರಿಯಾಗಿ ನಡೆಯುತ್ತಿದ್ದ ಆನೇಕಲ್‌ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ವಿಜಯದಶಮಿ ಉತ್ಸವ ಈ ಬಾರಿ ಕೋವಿಡ್ ಸೋಂಕು ಹಿನ್ನೆಲೆ ಸರಳ, ಸಾಂಪ್ರದಾಯಿಕವಾಗಿ ನಡೆಯಿತು.

Advertisement

ರಾಜ್ಯ ಮತ್ತು ನೆರೆ ರಾಜ್ಯಗಳ ಖ್ಯಾತ ಜಾನಪದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ನೀಡಿದವು. 9 ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ದಸರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭಕ್ತರಿಗೆ ಅನುವು: ವಿಜಯ ದಶಮಿ ಪ್ರಯುಕ್ತ ಉತ್ಸವ ಮೂರ್ತಿಗೆ ಸರ್ವಾಲಂಕಾರ ಮಾಡ ಲಾಗಿತ್ತು. ಯುವಕ ಸಂಘದ ಪದಾಧಿಕಾರಿಗಳುಉತ್ಸವ ಮೂರ್ತಿಯನ್ನು ಉಯ್ನಾಲೆಯಂತೆ (ಊಂಜಲ್‌ ಸೇವೆ) ತೂಗುವ ಮೂಲಕಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಮಾದರಿ ನಗರಕ್ಕೆ ಸಂಕಲ್ಪ: ಶಾಸಕ ಬಿ.ಶಿವಣ್ಣ ಮಾತನಾಡಿ, ಕೋವಿಡ್‌-19 ಕಾರಣ ಅದ್ಧೂರಿ ದಸರೆಗೆ ಅವಕಾಶವಾಗಲಿಲ್ಲವಾದರೂ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚೌಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಆನೇಕಲ್‌ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಮಾದರಿ ನಗರವನ್ನಾಗಿಸಲು ಪಣ ತೊಟ್ಟಿದ್ದೇನೆ ಎಂದರು.

ದೇವಿಯ ಸೇವೆಗೆ ಕೈಜೋಡಿಸಿ: ದೇಗುಲ ಸಮಿತಿಯ ಶ್ರೀನಿವಾಸ್‌ ಮತ್ತು ರಾಜು ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗಾಗಿ ಅಕ್ಕಪಕ್ಕದ ಭೂಮಿ ಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕುಲಸ್ಥರು ಮತ್ತು ದಾನಿಗಳು ಮುಂದೆ ಬಂದು ದೇವಿಯ ಸೇವೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

Advertisement

ಶ್ರೀ ಭವಾನಿ ಶಂಕರ ಸ್ವಾಮಿ ಗಂಗಾಪರಮೇಶ್ವರಿ ದೇಗುಲ ಹಾಗೂ ಕಾಳಿಕಮಟೇಶ್ವರ ದೇಗುಲಗಳಲ್ಲಿ ಹತ್ತೂ ದಿನ ವಿಶೇಷ ಪೂಜೆ, ಅಲಂಕಾರ, ಪ್ರಸಾದ ನಿಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಲ್ಲಕ್ಕಿ ಉತ್ಸವಕ್ಕೆ ಪ್ರಭಾಕರ್‌ ರೆಡ್ಡಿ ಚಾಲನೆ :  ಕರ್ನಾಟಕ ರಾಜ್ಯ ರೆವಿನ್ಯೂ ನಿವೇಶನದಾರರ ಸಂಘದ ರಾಜ್ಯಾಧ್ಯಕ್ಷ ಡಾ. ಆರ್‌. ಪ್ರಭಾಕರ್‌ರೆಡ್ಡಿ ಜಾನಪದ ಕಲಾ ತಂಡಗಳು ಮತ್ತು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಆನೇಕಲ್‌ ಗ್ರಾಮ ದೇವತೆ ಚೌಡೇಶ್ವರಿ ದೇವಿಯು ಭಕ್ತಾದಿಗಳಿಗೆ ಪ್ರೇರಣೆ ನೀಡಿ ತನ್ನ ಸೇವೆ ಮಾಡಿಸಿಕೊಳ್ಳುತ್ತಾರೆ. ಪ್ರಭಾಕರ ರೆಡ್ಡಿ ನೆಪಮಾತ್ರ ಎಂದ ಅವರು, ಈ ಬಾರಿ ಸರಳ ಹಾಗೂ ಸಮೃದ್ಧಿಯಾಗಿ ಎಲ್ಲ ಸೇವೆಗಳೂ ನಡೆದಿದ್ದು, ಎಂದಿನಂತೆ ದಿನ ಪೂರ್ತಿ ಪ್ರಸಾದ ನಿಯೋಗ, ಅನ್ನ ದಾನ ಸೇವೆ ನಡೆದಿದೆ. ಸ್ವತ್ಛತೆ, ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಿದ್ದಾರೆ. ಸುರಕ್ಷತೆಗೆ ಕಾಪಾಡುವಿಕೆಗಾಗಿ ಮಾಡಿದ ಮನವಿ ಜನರು ಸ್ಪಂದಿಸಿದ್ದು, ಕೋವಿಡ್‌ ಪರೀಕ್ಷಾ ಕೇಂದ್ರ ವನ್ನು ದೇಗುಲದ ಬಳಿ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next