Advertisement

ಮೇ 5ರಿಂದ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ

05:37 PM Apr 25, 2022 | Team Udayavani |

ಚಿತ್ರದುರ್ಗ: ತಾಲೂಕಿನ ಆಲದಮರದ ಮಾಳೇನಹಳ್ಳಿ ಶ್ರೀ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ಮೇ 5ರಿಂದ 9ರವರೆಗೆ ನಡೆಯಲಿದೆ. ಮೇ 5ರಂದು ಬೆಳಗ್ಗೆ 9:30ರಿಂದ ಶ್ರೀ ಚೌಡೇಶ್ವರಿದೇವಿಯ ಗಂಗಾಪೂಜೆ ಮತ್ತು ಕಳಸಪೂಜೆ ಹಾಗೂ ಬಳಿಗಟ್ಟೆ, ಹಿರೇಕಬ್ಬಿಗೆರೆ ಮಜುರೆ ಗೊಲ್ಲರಹಟ್ಟಿ ಬ್ಯಾಲಹಾಳ್‌, ಮಾಳೇನಹಳ್ಳಿ ಗ್ರಾಮಸ್ಥರಿಂದ ಸಂಜೆ ಹೋಮ ಮತ್ತು ಅಖಂಡ ಭಜನೆ ಜರುಗಲಿದೆ.

Advertisement

ಮೇ 6ರಂದು ಬೆಳಗ್ಗೆ 6ರಿಂದ 7:30 ರವರೆಗೆ ಶ್ರೀ ಚೌಡೇಶ್ವರಿದೇವಿ ದೇವಸ್ಥಾನ ಗೋಪುರದ ಕಳಸರೋಹಣ, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ, ಸಂಜೆ ಶ್ರೀ ಚೌಡೇಶ್ವರಿದೇವಿಯ ಮದುವಣಗಿತ್ತಿ ಶಾಸ್ತ್ರವು ಬಳಿಗಟ್ಟೆ, ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಬ್ಯಾಲಹಾಳ್‌ ಗ್ರಾಮಸ್ಥರಿಂದ ನೆರವೇರಲಿದೆ. ಮೇ 7ರಂದು ಬೆಳಗ್ಗೆ 6:30ಕ್ಕೆ ಉಚ್ಚಾಯ ರಥೋತ್ಸವ, ಮಧ್ಯಾಹ್ನ ಮೀಸಲು, ಕೋಲುಮೇಳ ಪಾನಕಬಂಡಿ ಕಾರ್ಯಕ್ರಮ, ಮೇ 8ರಂದು ಮಧ್ಯಾಹ್ನ 2ಕ್ಕೆ ಕೊಟ್ರಮ್ಮ ಎಚ್‌. ಹನುಮಂತಪ್ಪ ಕುಟುಂಬದಿಂದ ಪೂಜೆ, ಮಹಾಮಂಗಳಾರತಿ, ಸಂಜೆ 4ಕ್ಕೆ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಹಾಗೂ ಮಾಳೇನಹಳ್ಳಿ ಗ್ರಾಮಸ್ಥರಿಂದ ಸಿಡಿ ಉತ್ಸವ ಜರುಗಲಿದೆ. ಮೇ 9ರಂದು ಹಿರೇಕಬ್ಬಿಗೆರೆ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಓಕಳಿ ಮತ್ತು ಮಹಾಮಂಗಳಾರತಿ ನೆರವೇರಲಿದೆ.

ಮೇ 8ರಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ನೂತನ ಗೋಪುರದ ಕಳಸರೋಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಟಿ. ರಘುಮೂರ್ತಿ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್. ನವೀನ್‌, ಮಾಜಿ ಸಚಿವ ಎಚ್‌. ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಎಚ್‌. ಹನುಮಂತಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ, ತಹಶೀಲ್ದಾರ್‌ ಸತ್ಯನಾರಾಯಣ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು.

ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬ್ಯಾಲಹಾಳ್‌ ಕೆ.ಎಚ್. ಬಸವರಾಜಪ್ಪ, ಉಪಾಧ್ಯಕ್ಷ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಕೆ. ಕಾಟಲಿಂಗಪ್ಪ, ಕಾರ್ಯದರ್ಶಿ ಮಾಳೇನಹಳ್ಳಿ ಬಿ. ಸುರೇಶ, ಪೂಜಾರಿ ಚಿತ್ರಲಿಂಗಪ್ಪ, ಧರ್ಮದರ್ಶಿಗಳು, ಐದು ಹಳ್ಳಿಗಳ ಗ್ರಾಮಸ್ಥರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next