Advertisement

Ammembala ಸಾಹಿತ್ಯ ಪ್ರಶಸ್ತಿಗೆ ಆಯ್ಕೆ; ಜನವರಿ 24ರಂದು ಮಂಗಳೂರು ವಿ.ವಿ.ಯಲ್ಲಿ ಪ್ರದಾನ

11:51 PM Jan 21, 2024 | Team Udayavani |

ಮಂಗಳೂರು: ಹಿರಿಯ ನವೋದಯ ಕವಿ, ಸಂಸ್ಕೃತ-ಕನ್ನಡ ಭಾಷಾ ಪಂಡಿತರಾದ ವಿದ್ವಾನ್‌ ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ವತಿಯಿಂದ 2020, 2021, 2022 ಹಾಗೂ 2023ನೇ ಸಾಲಿನ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರಕಟಿಸಲಾಗಿದೆ.

Advertisement

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಜಾನಪದ ತಜ್ಞ, ಸಂಶೋಧಕ ಡಾ| ಹಿ.ಚಿ. ಬೋರಲಿಂಗಯ್ಯ (2020), ಬೆಂಗಳೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕ, ವಿಮರ್ಶಕ ಡಾ| ಬಸವರಾಜ ಕಲ್ಗುಡಿ, (2021), ಹಿರಿಯ ಸಂಶೋಧಕ, ನಿವೃತ್ತ ಪ್ರಾಂಶುಪಾಲ ಡಾ| ಪಾದೇಕಲ್ಲು ವಿಷ್ಣು ಭಟ್ಟ (2022) ಹಾಗೂ ಹಿರಿಯ ಸಂಶೋಧಕ ಹಾಗೂ ನಿವೃತ್ತ ಪ್ರಾಂಶುಪಾಲ ಡಾ| ಬಿ. ಜನಾರ್ದನ ಭಟ್‌ (2023) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಸಂಪುಟವನ್ನು ಒಳಗೊಂಡಿದೆ.

ಮಂಗಳೂರು ವಿ.ವಿ.ಯ ಪ್ರೊ| ಎಸ್‌.ವಿ. ಪರಮೇಶ್ವರ ಭಟ್ಟ ಕನ್ನಡ ಅಧ್ಯಯನ ಕೇಂದ್ರದಲ್ಲಿ ಜ. 24ರಂದು ಬೆಳಗ್ಗೆ 10.30 ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಸಾಪ ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿ.ವಿ. ಕುಲಪತಿ ಡಾ| ಜಯರಾಜ್‌ಅಮೀನ್‌ ಅಧ್ಯಕ್ಷತೆ ವಹಿಸಲಿದ್ದು, ಕರ್ಣಾಟಕ ಬ್ಯಾಂಕ್‌ ಮಾಜಿ ಎಂಡಿ ಡಾ| ಮಹಾಬಲೇಶ್ವರ ಎಂ.ಎಸ್‌. ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ| ಅಜಕ್ಕಳ ಗಿರೀಶ್‌ ಭಟ್‌ ಅಭಿನಂದನ ಭಾಷಣ ಮಾಡುವರು ಎಂದು ಪ್ರತಿಷ್ಠಾನದ ಅಧ್ಯಕ್ಷ, ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next