Advertisement
ಭಾರತೀಯರ ಪಾಲಿಗೆ ನೃತ್ಯವೆಂಬುದು ದೇವಕಲೆ. ಶಿವನ ತಾಂಡವ ನೃತ್ಯ, ವಿಷ್ಣುವಿನ ಮೋಹಿನಿ ನೃತ್ಯ, ಕೃಷ್ಣನ ಬಾಲ ನೃತ್ಯ- ಇವೆಲ್ಲಾ ನೃತ್ಯವೆಂಬುದು ದೇವರ ಕಲೆ ಎನ್ನುವ ಮಾತಿಗೆ ಸಾಕ್ಷಿಯಾಗುವ ದೃಷ್ಟಾಂತಗಳು. ಇವತ್ತಿನ ಸಂದರ್ಭದಲ್ಲಿ ನೃತ್ಯವೆಂಬುದು ಹತ್ತಾರು ಬಗೆಯಲ್ಲಿ ಟಿಸಿಲೊಡೆದಿದೆ. ನೃತ್ಯವನ್ನು ನೋಡುವವರೂ ಹೆಚ್ಚುತ್ತಿದ್ದಾರೆ. ಮತ್ತೂಂದು ಕಡೆಯಲ್ಲಿ ನೃತ್ಯ ಕಲಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶೀಯ ನೃತ್ಯ ಪ್ರಕಾರಗಳು, ಪಾಶ್ಚಾತ್ಯ ನೃತ್ಯ ಪ್ರಕಾರಗಳಿಗೂ ನಮ್ಮಲ್ಲಿ ಮಹತ್ವವಿದೆ. ಈ ಕಾರಣದಿಂದಲೇ ನೃತ್ಯ ಸಂಯೋಜಿಸುವ ಕೊರಿಯೋಗ್ರಾಫರ್‌ಗಳಿಗೆ ಬೇಡಿಕೆ ಹೆಚ್ಚತೊಡಗಿದೆ.
Related Articles
ಪಿಯುನಲ್ಲಿ ಯಾವುದೇ ವಿಷಯ ಅಭ್ಯಾಸ ಮಾಡಿದ ಬಳಿಕ ಪದವಿಯಲ್ಲಿ ನೃತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಕೋರಿಯೋಗ್ರಾಫರ್ ಆಗಬಹುದು. ಇದಲ್ಲದೆ, ಮತ್ತೂಂದು ಮಾರ್ಗದಲ್ಲಿ ಡ್ಯಾನ್ಸ್ ಅಕಾಡೆಮಿಗಳಲ್ಲಿ ತರಬೇತಿ ಪಡೆದೂ ಕೊರಿಯೋಗ್ರಾಫರ್ ಆಗಬಹುದು. ಜತೆಗೆ ಶಾಸ್ತ್ರೀಯ ನೃತ್ಯಶಾಲೆಗಳಲ್ಲಿ ಪರಿಣತಿ ಪಡೆಯಬಹುದು.
Advertisement
ಈ ಕೌಶಲ್ಯಗಳೂ ಅವಶ್ಯ– ದೈಹಿಕ ಸ್ವಾಸ್ಥ್ಯ, ಸಾಮರ್ಥ್ಯ, ಸಮತೋಲನ ಅಗತ್ಯ.
– ಸಮೂಹದಲ್ಲಿ ಸೌಹಾರ್ದತೆ ಕಾಯ್ದುಕೊಂಡು ಕಾರ್ಯನಿರ್ವಸುವ ತಂತ್ರಗಾರಿಕೆ.
– ಭಾರತೀಯ ನೃತ್ಯ ಪ್ರಕಾರಗಳ ಚರಿತ್ರೆ, ನಾಟ್ಯಶಾಸ್ತ್ರದ ಬಗ್ಗೆ ಅರಿವು.
– ಸಂಗೀತ, ತಾಳ ಜ್ಞಾನ.
– ಉತ್ತಮ ಸಂವಹನ ಮತ್ತು ನಾಯಕತ್ವ ಗುಣ ಅಗತ್ಯ. ಅವಕಾಶಗಳು ಎಲ್ಲೆಲ್ಲಿ?
– ಖಾಸಗಿ ಡ್ಯಾನ್ಸ್ ಗ್ರೂಪ್‌ಗ್ಳು
– ಸಿನಿಮಾ ಸ್ಟುಡಿಯೋಗಳು
– ಟಿ.ವಿ. ರಿಯಾಲಿಟಿ ಶೋಗಳು
– ರಂಗಭೂಮಿ
– ಸ್ವಂತ ಡ್ಯಾನ್ಸ್ ಶಾಲೆ ಓದುವುದು ಎಲ್ಲಿ?
– ಕರ್ನಾಟಕ ಸ್ಟೇಟ್ ಡಾ. ಗಂಗೂಬಾಯಿ ಹಾನಗಲ್ ಮ್ಯೂಜಿಕ್ ಅಂಡ್ ಪರ್ಫಾಮಿಂಗ್ ಆರ್ಟ್ಸ್ ಯೂನಿವರ್ಸಿಟಿ, ಮೈಸೂರು
– ಆಳ್ವಾಸ್ ಕಾಲೇಜು. ಮೂಡಬಿದಿರೆ, ಮಂಗಳೂರು (ಎಂ.ಎ. ಭರತನಾಟ್ಯ)
– ನಾಟ್ಯ ಇನ್ಸ್‌ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ, ಬೆಂಗಳೂರು
– ಎ.ಐ.ಎಂ.ಎಸ್ ಇನ್ಸ್‌ಟಿಟ್ಯೂಟ್, ಪೀಣ್ಯ, ಬೆಂಗಳೂರು (ಬಿ.ಎ. ಇನ್ಸ್ ಪರ್ಫಾಮಿಂಗ್ ಆರ್ಟ್ಸ್)
– ರೇವಾ ವಿಶ್ವವಿದ್ಯಾಲಯ, ಯಲಹಂಕ, ಬೆಂಗಳೂರು – ಅನಂತನಾಗ್ ಎನ್.