Advertisement

ಆಸ್ಕರ್‌ ನಾಮನಿರ್ದೇಶನ ಘೋಷಿಸುವುದು ಚೋಪ್ರಾ

06:40 AM Jan 23, 2018 | Harsha Rao |

ಮುಂಬಯಿ: ಅಮೆರಿಕ ಟೀವಿ ಮಾಧ್ಯಮದಲ್ಲಿ ಹೆಸರು ಮಾಡಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು 2016 ಮತ್ತು 2017ರ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಲ್ಲಿ ರೆಡ್‌ ಕಾಪೆìಟ್‌ ಮೇಲೆ ಹೆಜ್ಜೆ ಹಾಕಿದ್ದು ಗೊತ್ತಿರುವ ವಿಷಯವೇ.

Advertisement

ಅವರಿಗೀಗ ಹೊಸ ಅವಕಾಶವೊಂದು ಸಿಕ್ಕಿದ್ದು, 2018ರ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶನಗಳನ್ನು ಅವರೇ ಘೋಷಿಸಲಿದ್ದಾರೆ. ಆಸ್ಕರ್‌ ಪ್ರಶಸ್ತಿಯ ಅಧಿಕೃತ ಟ್ವಿಟರ್‌ ಖಾತೆಯೇ ನಾಮನಿರ್ದೇಶನ ಘೋಷಿಸಲು ಪ್ರಿಯಾಂಕಾ ಅವರು ಸಿದ್ಧಗೊಳ್ಳುತ್ತಿರುವ ಚಿತ್ರೀಕರಣದ ಫೋಟೋಗಳನ್ನು ಪೋಸ್ಟ್‌ ಮಾಡಿದೆ. ನಾಮನಿರ್ದೇಶನ ಬುಧವಾರ ಘೋಷಣೆಯಾಗಲಿದೆ ಎಂದು ಅಕಾಡೆಮಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next