ಇಸ್ಲಾಮಾಬಾದ್: ಸೇನಾ ಅಧಿಕಾರಿಗಳನ್ನೊಳಗೊಂಡ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಬಲೂಚಿಸ್ತಾನದ ಸಾಸ್ಸಿ ಪುನ್ನು ದೇವಾಲಯ ಮತ್ತು ವಿಂದಾರ್ ನಡುವೆ ಪತನಗೊಂಡಿರುವ ಘಟನೆ ಮಂಗಳವಾರ (ಆಗಸ್ಟ್ 02) ನಡೆದಿದೆ.
ಇದನ್ನೂ ಓದಿ:ಭಟ್ಕಳ ತಾಲೂಕಿನಲ್ಲಿ ಮೇಘ ಸ್ಫೋಟ : ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಸಿಲುಕಿರುವ ಶಂಕೆ
ಬಲೂಚಿಸ್ತಾನ್ ಪೋಸ್ಟ್ ವರದಿ ಪ್ರಕಾರ, ದುರಂತ ನಡೆದ ಸ್ಥಳಕ್ಕೆ ರಕ್ಷಣಾ ತಂಡ ಇನ್ನಷ್ಟೇ ತಲುಪಬೇಕಾಗಿದೆ. ಹೆಲಿಕಾಪ್ಟರ್ ನಲ್ಲಿ ಪಾಕ್ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಸರ್ಫರಾಜ್ ಅಲಿ ಕೂಡಾ ಪ್ರಯಾಣಿಸುತ್ತಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನ್ ಸೇನಾಪಡೆ ಈ ಕುರಿತು ಮಾಹಿತಿ ನೀಡಿದ್ದು, ಬಲೂಚಿಸ್ತಾನದ ಲಾಸ್ಬೇಲಾ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿಸಿದೆ.
ಹೆಲಿಕಾಪ್ಟರ್ ನಲ್ಲಿ ಒಟ್ಟು ಆರು ಮಂದಿ ಪಾಕ್ ಸೇನಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದು, ಬಹುತೇಕ ಎಲ್ಲರೂ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಸಾವು, ನೋವಿನ ಬಗ್ಗೆ ಪಾಕ್ ಸೇನೆ ಇನ್ನಷ್ಟೇ ಖಚಿತ ಮಾಹಿತಿ ನೀಡಬೇಕಾಗಿದೆ ಎಂದು ವರದಿ ಹೇಳಿದೆ.