Advertisement
ಹೊಸಪೇಟೆಯ ಕೊಟ್ಟೂರೇಶ್ವರ ಮಠದ ಡಾ| ಸಂಗನ ಬಸವ ಸ್ವಾಮೀಜಿಗಳು ಆಯೋಜಿಸಿದ್ದ ಸರ್ವಧರ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೇಜಾವರ ಶ್ರೀಗಳು ಶುಕ್ರವಾರ ಬೆಳಗ್ಗೆ ಹೊಸಪೇಟೆಗೆ ಆಗಮಿಸಿದ್ದರು. ಪೇಜಾವರ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಉಡುಪಿಯಿಂದ ಇಲ್ಲಿಗೆ ಆಗಮಿಸಲು ವಿಜಯನಗರದ ಮಾಜಿ ಶಾಸಕ ಆನಂದ್ ಸಿಂಗ್ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಗಳು ವಾಪಸ್ ಉಡುಪಿಗೆ ತೆರಳಲು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸ್ವಲ್ಪ ದೂರ ಸಾಗಿ ಹೊಳಲು ಗ್ರಾಮ ಸಮೀಪಿಸುತ್ತಿದ್ದಂತೆ ಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದನ್ನು ಅರಿತ ಪೈಲಟ್ ಕೂಡಲೇ ಹತ್ತಿರದ ಸಾಧನಾ ಸನಿವಾಸ ಶಾಲೆಯ ಮೈದಾನದಲ್ಲಿ ಕಾಪ್ಟರ್ ಇಳಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ. ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ದಿಢೀರ್ ಇಳಿಯುತ್ತಿದ್ದಂತೆ ಶಾಲಾ ಮುಖ್ಯಸ್ಥರು ಹಾಗೂ ಸಿಬಂದಿ ಮೈದಾನದತ್ತ ಆಗಮಿಸಿದ್ದಾರೆ. ಕಾಪ್ಟರ್ ನಲ್ಲಿ ಶ್ರೀಗಳು ಇರುವುದನ್ನು ಕಂಡು ಯೋಗಕ್ಷೇಮ ವಿಚಾರಿಸಿದರು.
Advertisement
ಪೇಜಾವರ ಶ್ರೀ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
09:00 AM Mar 24, 2018 | Karthik A |
Advertisement
Udayavani is now on Telegram. Click here to join our channel and stay updated with the latest news.