Advertisement

ಯಾವುದು ಬೇಕೋ ಆರಿಸಿಕೊಳ್ಳಿ…

08:43 PM Sep 28, 2020 | Suhan S |

ಆಫ್ಲೈನ್‌ (ಅಂಗಡಿಗಳಲ್ಲಿ ) ಮಾರಾಟದಲ್ಲಿ ಸ್ಯಾಮ್‌ಸಂಗ್‌ ಮೊಬೈಲ್‌ಕಂಪನಿ ಹೆಚ್ಚು ಆಸಕ್ತಿ ವಹಿಸಿತ್ತು. ಆನ್‌ಲೈನ್‌ ಮಾರಾಟದಲ್ಲಿ, ನೀಡಿದ ಹಣಕ್ಕೆ ತಕ್ಕ ಮೊಬೈಲ್‌ಗ‌ಳು ದೊರಕುತ್ತವೆ ಎಂಬುದು ಗ್ರಾಹಕರಿಗೆ ಅರ್ಥವಾಗುತ್ತಿದ್ದಂತೆಕೇವಲ ಆನ್‌ ಲೈನ್‌ನಲ್ಲೇ ಮಾರಾಟ ಮಾಡುವ ಕಂಪನಿಗಳ ಮಾರುಕಟ್ಟೆಯೂ ಹಿಗ್ಗಿತು.ಕೇವಲ ಆಫ್ಲೈನ್‌ ಮಾರಾಟಕ್ಕೇ ಒತ್ತು ನೀಡಿದರೆ ತನ್ನ ಮಾರ್ಕೆಟ್‌ ಶೇರ್‌ ಕಡಿಮೆಯಾಗುತ್ತದೆ ಎಂಬುದನ್ನು ಅರಿತುಕೊಂಡ ಸ್ಯಾಮ್‌ಸಂಗ್‌, ಈಗ ಆನ್‌ಲೈನ್‌ ಮಾರಾಟಕ್ಕೆಂದು ಹೆಚ್ಚು ಗುಣವಿಶೇಷಣ ಗಳುಳ್ಳ, ಒಂದು ಹಂತಕ್ಕೆ ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್‌ಗ‌ಳನ್ನು ಎಂ ಸರಣಿಯಲ್ಲಿ ಬಿಡುಗಡೆ ಮಾಡುತ್ತಿದೆ.

Advertisement

ಇದುವರೆಗೆ ಎಂ ಸರಣಿಯಲ್ಲಿ20 ಸಾವಿರದೊಳಗಿನ ಮೊಬೈಲ್‌ ಗಳನ್ನು ಅದು ಬಿಡುಗಡೆ ಮಾಡುತ್ತಿತ್ತು. ಈಗ20 ಸಾವಿರ ಬೆಲೆ ದಾಟಿ ಎಂ ಸರಣಿಯ ಹೊಸ ಮೊಬೈಲ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ51 ಅನ್ನು ಇದೀಗ ತಾನೇ ಬಿಡುಗಡೆ ಮಾಡಿದೆ. (ಎ51 ಎಂಬುದು ಬೇರೆ ಮಾದರಿ.

ಇದು ಎಂ51 ಎಂಬುದು ನೆನಪಿರಲಿ) ಸ್ಯಾಮ್‌ಸಂಗ್‌ ಈ ಮಾಡೆಲ್‌ ಅನ್ನು ಬಿಡುಗಡೆ ಮಾಡಿರುವುದು ಒನ್‌ ಪ್ಲಸ್‌ ನೋರ್ಡ್‌ ಪೈಪೋಟಿ ನೀಡುವ ಸಲುವಾಗಿ ಎಂಬುದು ಅದರ ಸ್ಪೆಸಿಫಿಕೇಷನ್‌ ನೋಡಿದರೆ ತಿಳಿಯುತ್ತದೆ. ಈ ಎರಡೂ ಮೊಬೈಲ್‌ಗ‌ಳ ವ್ಯತ್ಯಾಸಗಳೇನು? ಎಂದು ನೋಡೋಣ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ 51 ಪ್ರೊಸೆಸರ್‌: ಸಾಮಾನ್ಯವಾಗಿ ಸ್ಯಾಮ್‌ಸಂಗ್‌ ಮೊಬೈಲ್‌ಗ‌ಳಲ್ಲಿ ಅವರದೇ ತಯಾರಿಕೆಯಾದ ಎಕ್ಸಿನಾಸ್‌ ಪ್ರೊಸೆಸರ್‌ ಹಾಕಲಾಗುತ್ತದೆ. ಈ ಮಾಡೆಲ್‌ನಲ್ಲಿ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ನೀಡಲಾಗಿದೆ. ಸ್ನಾಪ್‌ಡ್ರಾಗನ್‌ ಪ್ರೊಸೆಸರೇ ಬೇಕು ಎಂಬ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಇದು ಉತ್ತಮ ಪ್ರೊಸೆಸರ್‌ ಮತ್ತು ಶಕ್ತಿಶಾಲಿ ಎಂಬುದು ಇದಕ್ಕೆ ಕಾರಣ. ಗ್ರಾಹಕರ ಬೇಡಿಕೆ ಅನುಸರಿಸಿ ಸ್ಯಾಮ್‌ಸಂಗ್‌ ಈ ಮಾದರಿಯಲ್ಲಿ ಸ್ನಾಪ್‌ಡ್ರಾಗನ್‌730ಜಿ ಪ್ರೊಸೆಸರ್‌ ಅಳವಡಿಸಿದೆ. ಇದು2.2 ಗಿ.ಹ. ವೇಗ ಹೊಂದಿದೆ. ಅಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆ ಇದೆ. ಇದಕ್ಕೆ ಸ್ಯಾಮ್‌ ಸಂಗ್‌ನ ಒನ್‌ ಯುಐ ಸ್ಕಿನ್‌ ಇದೆ.

ಪರದೆ: ಇದು6.7 ಇಂಚಿನ, ಮಧ್ಯದಲ್ಲಿ ಪಂಚ್‌ ಹೋಲ್‌ ಉಳ್ಳ, ಎಚ್‌ಎಚ್‌ಡಿ ಪ್ಲಸ್‌ ಅಮೋಲೆಡ್‌ ಪರದೆ ಹೊಂದಿದೆ. ಬೆರಳಚ್ಚು ಸ್ಕ್ಯಾನರ್‌ ಮೊಬೈಲ್‌ನ ಸೈಡ್‌ನ‌ಲ್ಲಿದೆ. ಇದರಲ್ಲಿ ಎರಡು4 ಜಿ ಸಿಮ್‌ಗಳನ್ನು ಹಾಕಿಕೊಳ್ಳಬಹುದು. ಈ ಮೊಬೈಲ್‌ನ ಬಾಡಿ ಪ್ಲಾಸ್ಟಿಕ್‌ನದು.

Advertisement

ಕ್ಯಾಮೆರಾ: 64 ಮೆ.ಪಿ. (ಸೋನಿ ಐಎಂಎಕ್ಸ್ 682 ಸೆನ್ಸರ್‌), 12, ಎಂಪಿ.5 ಎಂಪಿ 5 ಎಂಪಿ ಒಟ್ಟು ನಾಲ್ಕು ಲೆನ್ಸ್‌ಗಳ ಹಿಂಬದಿ ಕ್ಯಾಮೆರಾ ಹೊಂದಿದೆ. ಮುಂಬದಿ ಒಂಟಿ ಕ್ಯಾಮೆರಾ32 ಮೆ.ಪಿ. ಹೊಂದಿದೆ.

ಬ್ಯಾಟರಿ: ಬ್ಯಾಟರಿ ಭರ್ಜರಿಯಾಗಿರಬೇಕು ಎನ್ನುವವರಿಗೆ ಹೇಳಿ ಮಾಡಿಸಿದಂತಿದೆ ಈ ಫೋನು. 7000 ಎಂಎಎಚ್‌ ಬ್ಯಾಟರಿ ಹೊಂದಿದೆ! ಅದಕ್ಕೆ25 ವ್ಯಾಟ್‌ ಯುಎಸಿº ಟೈಪ್‌ ಸಿ ಚಾರ್ಜರ್‌ ನೀಡಲಾಗಿದೆ. ಈ ಮೊಬೈಲ್‌ನ ವಿಶೇಷ ಎಂದರೆ, ಇದರಿಂದ ನೀವು ಬೇರೊಂದು ಮೊಬೈಲ್‌ಗೆ ಅಥವಾ ಇಯರ್‌ಫೋನ್‌ ಇತ್ಯಾದಿಗಳಿಗೆ ರಿವರ್ಸ್‌ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದು. ಅದಕ್ಕೆ ಟೈಪ್‌ ಸಿ ಕೇಬಲ್‌ ಅನ್ನು ಸಹ ಬಾಕ್ಸ್ ನಲ್ಲೇ ನೀಡಲಾಗಿದೆ. ವೈರ್ಡ್‌ ಇಯರ್‌ಫೋನ್‌ ಪ್ರಿಯರಿಗೆ 3.5 ಎಂಎಂ ಆಡಿಯೋ ಜಾಕ್‌ ಇದೆ. ಇದು 6 ಜಿಬಿ ರ್ಯಾಮ್‌ ಮತ್ತು128 ಜಿಬಿ ಆಂತರಿಕ ಸಂಗ್ರಹ (25000 ರೂ.),8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (27000 ರೂ.) ಈ ಎರಡು ಮಾದರಿಯಲ್ಲಿ ದೊರಕುತ್ತದೆ.

ಒನ್‌ ಪ್ಲಸ್‌ ನೋರ್ಡ್‌ ಇದರಲ್ಲಿರುವ ಪ್ರೊಸೆಸರ್‌ ಸ್ನ್ಯಾಪ್‌ ಡ್ರಾಗನ್‌765ಜಿ.2.2 ಗಿ.ಹ ವೇಗ. ಇದು5ಜಿ ಸಿಮ್‌ ಬೆಂಬಲಿಸುತ್ತದೆ. ಭಾರತದಲ್ಲಿ ಸದ್ಯ5ಜಿ ನೆಟ್‌ ವರ್ಕ್‌ ಇಲ್ಲ. ಹಾಗಾಗಿ 4ಜಿಯನ್ನೇ ಬಳಸಬೇಕು. ಅಂಡ್ರಾಯ್ಡ್ 10, ಇದಕ್ಕೆ ಆಕ್ಸಿಜನ್‌ ಓಎಸ್‌ ಇದೆ.

ಪರದೆ: ಇದು 6.44 ಇಂಚಿನ , ಫ‌ುಲ್‌ ಎಚ್‌ಡಿ ಪ್ಲಸ್‌ ಅಮೋಲೆಡ್‌ ಪರದೆ ಹೊಂದಿದೆ. ಪರದೆ ಎಡ ಅಂಚಿನಲ್ಲಿ ಎರಡು ಪಂಚ್‌ ಹೋಲ್‌ ಇರುವ ಡಿಸ್ ಪ್ಲೇ ಹೊಂದಿದೆ. ಡಿಸ್ ಪ್ಲೇ ಮೇಲೆಯೇ ಬೆರಳಚ್ಚು ಸ್ಕ್ಯಾನರ್‌ ಹೊಂದಿದೆ. ಈ ಫೋನಿನ ಬಾಡಿ ಗ್ಲಾಸ್‌ನದು. ಇದಕ್ಕೆ ಎರಡೂ ಬದಿ ಗೊರಿಲ್ಲಾ ಗ್ಲಾಸ್‌ ಲೇಯರ್‌ ಇದೆ.

ಕ್ಯಾಮೆರಾ: ಇದು48 ಮೆಪಿ. (ಸೋನಿ ಐಎಂಎಕ್ಸ್ 586), 8 ಮೆಪಿ,5 ಮೆಪಿ,2 ಮೆಪಿ, ನಾಲ್ಕು ಲೆನ್ಸ್‌ಗಳ ಹಿಂಬದಿ ಕ್ಯಾಮೆರಾ ಹೊಂದಿದೆ. ಮುಂಬದಿ ಕ್ಯಾಮೆರಾ32 ಮೆ.ಪಿ. (ಸೋನಿ ಐಎಎಕ್ಸ್ 616) ಮತ್ತು8 ಮೆ.ಪಿ. ಎರಡು ಲೆನ್ಸ್  ಹೊಂದಿದೆ.

ಬ್ಯಾಟರಿ: ಇದು4115 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದಕ್ಕೆ30 ವ್ಯಾಟ್‌ ವೇಗದ ಟೈಪ್‌ ಸಿ ಚಾರ್ಜರ್‌ ನೀಡಲಾಗಿದೆ. ಆದರೆ ಎಂದಿನಂತೆ3.5 ಎಂಎಂ ಆಡಿಯೋ ಜಾಕ್‌ ಇಲ್ಲ. ಇದು8 ಜಿಬಿ ರ್ಯಾಮ್‌ ಮತ್ತು128 ಜಿಬಿ ಆಂತರಿಕ ಸಂಗ್ರಹ (28000ರೂ.),12 ಜಿಬಿ ರ್ಯಾಮ್‌ ಮತ್ತು256 ಜಿಬಿ ಆಂತರಿಕ ಸಂಗ್ರಹ (30000 ರೂ.,) ಎರಡು ಆವೃತ್ತಿ ಹೊಂದಿದೆ.64 ಜಿಬಿ ಆವೃತ್ತಿಯ ಫೋನ್‌ ಮುಂದೆ ಬರಲಿದೆ.

 

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next